Breaking
2 Jul 2026, Thu

ಬಟ್ಟೆ ಒಗೆಯಲು ಹೋಗಿದ್ದ ಮಹಿಳೆ ಶವವಾಗಿ ಪತ್ತೆ

ಪುತ್ತೂರು: ಬಟ್ಟೆ ಒಗೆಯಲೆಂದು ತೋಡಿಗೆ ತೆರಳಿದ್ದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾದ ಘಟನೆ ಪುತ್ತೂರಿನ ಕೆದಿಲ ಕಾಂತಕೋಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಕಾಂತಕೋಡಿಯ ರಾಮಣ್ಣ ಗೌಡ ಅವರ ಪತ್ನಿ ಮಮತಾ (35) ಎಂದು ಗುರುತಿಸಲಾಗಿದೆ.

ಇವರು ಬುಧವಾರ ಬೆಳಗ್ಗೆ ಬಟ್ಟೆ ಒಗೆಯಲೆಂದು ತೋಡಿಗೆ ತೆರಳಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಮತಾ ಅವರ ಸಾವಿಗೆ ಕಾರಣ ಇನ್ನು ತಿಳಿದು ಬಂದಿಲ್ಲ.

ಈ ನಡುವೆ ಮೃತ ಮಹಿಳೆಯ ಪತಿಯ ಸಹೋದರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದು ಸಂಶಯಕ್ಕೆ ಕಾರಣವಾಗಿದೆ.

ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *