Breaking
23 Mar 2026, Mon

ಧರ್ಮಸ್ಥಳ ಠಾಣೆಯಲ್ಲಿ ಮತ್ತೊಬ್ಬನಿಂದ ದೂರು ದಾಖಲು

ಧರ್ಮಸ್ಥಳ: ಗ್ರಾಮದಲ್ಲಿ ಅನಾಮಿಕ ಮುಸುಕುದಾರಿ ನೀಡಿದ ದೂರಿನಂತೆ ಕಳೇಬರಹಕ್ಕಾಗಿ ಹುಡುಕಾಟ ಮುಂದುವರೆದಿದ್ರೆ, ಇನ್ನೊಂದು ಕಡೆ ಮತ್ತೊಬ್ಬ ವ್ಯಕ್ತಿ ಠಾಣೆಗೆ ಬಂದು ದೂರು ನೀಡಿದ್ದಾರೆ.

ಸಾಮಾಜಿಕ ಕಾರ್ಯಕರ್ತರಾಗಿರುವ ಜಯನ್ ಟಿ ಎಂಬವರು ದೂರು ನೀಡಿರುವ ವ್ಯಕ್ತಿಯಾಗಿದ್ದಾರೆ.

ನಾನು ಬಾಲಕಿಯ ಶವವನ್ನು ಹೂತು ಹಾಕುವುದನ್ನು ನೋಡಿದ್ದು,ಅಲ್ಲದೆ ಈ ಕುರಿತಂತೆ ನಾನು ಎಸ್ ಐಟಿಗೆ ಮಾಹಿತಿ ನೀಡುವುದಾಗಿ ಇವರು ಮಾಧ್ಯಮಳಿಗೆ ಹೇಳಿಕೆ ನೀಡಿದ್ದರು.

ಹೀಗಾಗಿ ಜಯನ್ ಟಿ ಗೆ ಕಾನೂನು ಪ್ರಕ್ರಿಯೆ ಪ್ರಕಾರವೇ ನಡೆಯುವಂತೆ ಧರ್ಮಸ್ಥಳ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ದೂರು ನೀಡುವಂತೆ ಎಸ್.ಐ.ಟಿ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಜಯನ್ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *