Breaking
23 Mar 2026, Mon

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ ಹಸ್ತಾಂತರ

ಬಂಟ್ವಾಳ : ತಾಲೂಕಿನ ನರಿಕೊಂಬು ಗ್ರಾಮದ ವೀರಮಾರುತಿನಗರ  ನಿವಾಸಿ ಶ್ರೀಮತಿ ಆಶಾ ರವರ ಮನೆಗೆ  ಗಾಳಿ ಮಳೆಗೆ ತೆಂಗಿನ ಮರ ಬಿದ್ದು  ಹಾನಿಯಾಗಿದ್ದು, ಪರಿಹಾರವಾಗಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜುರಾದ  ಸಹಾಯಧನವನ್ನು ಮನೆ ಭೇಟಿ ಮಾಡಿ ವಿತರಿಸಲಾಯಿತು.

ಈ ಸಂದರ್ಭ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ, ಒಕ್ಕೂಟದ ಅಧ್ಯಕ್ಷರಾದ ಜಯಂತ್, ವೀರಮಾರುತಿ ಭಜನಾ ಮಂದಿರದ ಮಾಜಿ ಅಧ್ಯಕ್ಷರಾದ ಚಂದ್ರಹಾಸ, ತುಂಬೆ ವಲಯ ಮೇಲ್ವಿಚಾರಕಿ ಮಮತಾ , ಸೇವಾ ಪ್ರತಿನಿಧಿ ಕುಸುಮಾವತಿ, ಸ್ವ ಸಹಾಯ ಸಂಘದ ಸದಸ್ಯರಾದ ಕುಸಪ್ಪ ,ಮಂಜುನಾಥ, ಶಶಿಕಲಾ,  ವಿದ್ಯಾ, ಶೋಭಾ  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *