Breaking
12 May 2026, Tue

ಧರ್ಮಸ್ಥಳದ ಅಸ್ಥಿಪಂಜರಕ್ಕಾಗಿ ಹುಡುಕಾಟದಲ್ಲಿ ಬಿಗ್ ಟ್ವಿಸ್ಟ್

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಗ್ರಾಮದ ನೇತ್ರಾವತಿ ಸ್ನಾನ ಘಟ್ಟದ ಸಮೀಪ ಅಸ್ಥಿಪಂಜರಕ್ಕಾಗಿ ಎಸ್ ಐಟಿಯಿಂದ ನಡೆಯುತ್ತಿರುವ ಹುಡುಕಾಟಕ್ಕೆ ಇದೀಗ ರೋಚಕ ತಿರುವು ಸಿಕ್ಕಿದೆ.

ದೂರುದಾರ ಮೊದಲು ಗುರುತು ಮಾಡಿದ್ದ 11 ನೇ ಪಾಯಿಂಟ್ ಬದಲು ಇದೀಗ ಮತ್ತೊಂದು ಕಡೆ ಶವ ಹುಡುಕಲು ಎಸ್ ಐಟಿ ತಂಡಕ್ಕೆ ತಿಳಿಸಿದ್ದಾನೆ.

ಈ ನಿಟ್ಟಿನಲ್ಲಿ ಮುಸುಕುದಾರಿ ವ್ಯಕ್ತಿ ಕಾರ್ಯಾಚರಣೆ ನಡೆಸುತ್ತಿರುವ ಎಸ್ಐಟಿ ತಂಡವನ್ನು ಗುರುತಿಸಿದ ಸ್ಥಾನದಿಂದ ಮೇಲ್ಭಾಗಕ್ಕೆ ಕರೆದುಕೊಂಡು ಹೋಗಿ ಗುಡ್ಡದ ಮೇಲಿರುವ ಒಂದು ನಿರ್ದಿಷ್ಟ ಪ್ರದೇಶವನ್ನು ತೋರಿಸಿದ್ದಾನೆ. ಗುಡ್ಡದ ಮೇಲ್ಬಾಗಕ್ಕೆ ಇಡೀ ತಂಡವನ್ನು ಕರೆದೊಯ್ದು ಅನಾಮಿಕ ಅಗೆಯುವಿಕೆಗೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿ ನೀಡದೇ, ಗೊಂದಲದಿಂದಿರುವಂತೆ ವರ್ತಿಸಿದ್ದು ಎಸ್ಐಟಿಗೆ ಹಲವು ಅನುಮಾನಕ್ಕೆ ಕಾರಣವಾಗಿದೆ ಅಂತ ಹೇಳಲಾಗುತ್ತಿದೆ.

ಆತ ಗುರುತಿಸಿದ 11ನೇ ಸ್ಥಳದಲ್ಲಿ ಇನ್ನೂ ಅಗೆಯುವ ಕಾರ್ಯ ನಡೆದಿಲ್ಲ. ಈ ಪ್ರದೇಶಲ್ಲಿ ದಟ್ಟವಾದ ಕಾಡಿದ್ದು, ಕಾಡಿನ ಪ್ರದೇಶದಲ್ಲಿ ಏನಿದೆ ಎಂಬುದು ಎಲ್ಲರ ಕುತೂಹಕ್ಕೆ ಕಾರಣವಾಗಿದೆ.

ಜೊತೆಗೆ ಇನ್ನುಳಿದ ಪಾಯಿಂಟ್ ಗಳ ಬಗ್ಗೆಯೂ ಜನರ ಚಿತ್ತ ನೆಟ್ಟಿದೆ.

Leave a Reply

Your email address will not be published. Required fields are marked *