ಮಂಗಳೂರು: ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ತಾನು ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತಿರುವುದಾಗಿ, ಅ ಜಾಗಗಳನ್ನ ಪೊಲೀಸರಿಗೆ ತೋರಿಸುವುದಾಗಿ ಪತ್ರ ಬರೆದಿದ್ದು, ಅದು ರಾಜ್ಯಾದ್ಯoತ ಸಂಚಲನ ಸೃಷ್ಟಿಸಿತ್ತು, ಅದರ ಬೆನ್ನಲ್ಲೆ ರಾಜ್ಯ ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳನ್ನು ಹೊಂದಿದ ಎಸ್ಐಟಿ ಯನ್ನು ರಚಿಸಿತ್ತು, ಕಳೆದ ಎರಡು ದಿನಗಳಿಂದ ಈ ಎಸ್ಐಟಿ ತಂಡ ಆ ವ್ಯಕ್ತಿ ತಿಳಿಸಿದ ಜಾಗದಲ್ಲಿ ಹೆಣದ ಕಲೆಬರಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ಅದರ ಬೆನ್ನಲ್ಲೇ ಇದೀಗ ಎಸ್ಐಟಿ ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ತನ್ನ ಕಚೇರಿಯನ್ನು ತೆರೆದಿದ್ದು ಈ ಹೆಣಗಳ ಮಾಹಿತಿ ಇದ್ದವರು ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಿದೆ.

ತನಿಖೆಗೆ ಅನುಕೂಲವಾಗುವಂತೆ ಮತ್ತು ಸಾರ್ವಜನಿಕ ಸಹಕಾರವನ್ನು ಪಡೆಯುವ ಉದ್ದೇಶದಿಂದ, ಎಸ್ಐಟಿ ಮಂಗಳೂರು ನಗರದಲ್ಲಿ ಅಧಿಕೃತ ಕಚೇರಿಯನ್ನು ಸ್ಥಾಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಹೊಂದಿರುವ ವ್ಯಕ್ತಿಗಳು ಅಥವಾ ಎಸ್ಐಟಿ ಸಂಪರ್ಕಿಸಲು ಬಯಸುವವರು ಈ ಕೆಳಗಿನ ಮಾರ್ಗಗಳ ಮೂಲಕ ಸಂಪರ್ಕಿಸಬಹುದು:

ಎಸ್ಐಟಿ ಕಚೇರಿ ವಿಳಾಸ:
ನಿರೀಕ್ಷಾಣ ಮಂದಿರ,
ಮಲ್ಲಿಕಟ್ಟೆ, ಕದ್ರಿ,
ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ
ಕಚೇರಿ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ
ಸಂಪರ್ಕ ವಿವರಗಳು:
ದೂರವಾಣಿ: 0824-2005301
ವಾಟ್ಸಾಪ್: 8277986369
ಇಮೇಲ್: sitdps@ksp.gov.in

ವಿಚಾರಣೆಗೆ ಸಂಬಂಧಪಟ್ಟಂತೆ ತನಿಖೆಯಲ್ಲಿ ಎಸ್ಐಟಿಗೆ ನೆರವಾಗಲು ಯಾವುದೇ ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳಲು ಸಾರ್ವಜನಿಕರನ್ನು ಕೋರಲಾಗಿದೆ. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



