Breaking
19 Sep 2026, Sat

ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಆಲಾಡಿಯ ಸಹಾಯಕ ಶಿಕ್ಷಕ ಶಿವರಾಮ ರಾವ್ ಸೇವೆಯಿಂದ ನಿವೃತ್ತಿ

ಸಜೀಪ: ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಆಲಾಡಿ ಸಜೀಪ ಮುನ್ನೂರು ಇಲ್ಲಿ 9 ವರ್ಷಗಳ ಕಾಲ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಶಿವರಾಮ ರಾವ್ ಅವರನ್ನು ವಿದಾಯ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ವಹಿಸಿದ್ದರು.

ಶಿಕ್ಷಕರ ನಿವೃತ್ತ ಜೀವನ ಸುಖ ಹಾಗೂ ನೆಮ್ಮದಿಯಿಂದ ನೂರು ಕಾಲ ಬಾಳುವಂತಾಗಲಿ ಎಂದು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ರೋಹಿಣಿ ,ಸಹ ಅಧ್ಯಾಪಕಿ ಯು ಪದ್ಮಾವತಿ ಸೇವೆಯನ್ನು ಸ್ಮರಿಸಿದರು. ಶಿಕ್ಷಕಿ ಸುರೇಖಾ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ವಿದ್ಯಾ, ಧನ್ಯವಾದವಿತ್ತರು.

Leave a Reply

Your email address will not be published. Required fields are marked *