ಉಡುಪಿ: ಸಂತೆಕಟ್ಟೆ ಜಂಕ್ಷನ್‌ನಲ್ಲಿ ಕಾರು, ಬೈಕ್ ಮತ್ತು ಲಾರಿ ನಡುವೆ ಸರಣಿ ಅಪಘಾತವಾದ ಘಟನೆ ಇಂದು ನಡೆದಿದೆ.

ಲಾರಿಯೊಂದು, ರಸ್ತೆಯ ಮಧ್ಯಭಾಗದಲ್ಲಿ ಯು-ಟರ್ನ್ ತೆಗೆದುಕೊಳ್ಳಲು ಕಾಯುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮವಾಗಿ, ಕಾರು ಮುಂದೆ ಸಾಗಿ ಯು-ಟರ್ನ್ ತೆಗೆದುಕೊಳ್ಳಲು ಕಾಯುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ.

ಸಂತೆಕಟ್ಟೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಲಾರಿ ಎಂದು ತಿಳಿದುಬಂದಿದೆ.
ಸಂತೆಕಟ್ಟೆ ಮತ್ತು ಕುಂದಾಪುರ ಎರಡು ಕಡೆಯಿಂದ ಬರುವ ವಾಹನಗಳು ಈ ಒಂದೇ ಕೇಂದ್ರವನ್ನು ಬಳಸುವುದರಿಂದ ಅಡಚಣೆ ಉಂಟಾಗುತ್ತದೆ.
ಸಂತೆಕಟ್ಟೆಯ ಯು-ಟರ್ನ್ ಜಂಕ್ಷನ್ ಅಪಾಯಕಾರಿ ಸ್ಥಳವಾಗಿದೆ. ಭಾರೀ ಸಂಚಾರದಿಂದ ಅಪಘಾತಗಳು ಹೆಚ್ಚಾಗಿವೆ.



