Breaking
12 May 2026, Tue

ಬಂಟ್ವಾಳ: ಹೇಮಂತ್ ನಾಪತ್ತೆ ಪ್ರಕರಣ: 3ನೇ ದಿನವೂ ಪತ್ತೆಯಾಗದ ಸುಳಿವು

ಬಂಟ್ವಾಳ : ತಾಲೂಕಿನ ಕಡೇಶಿವಾಲಯದಲ್ಲಿ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹೇಮಂತ್ ಆಚಾರ್ಯಗಾಗಿ ಇಂದು ಕೂಡ ಶೋಧ ಕಾರ್ಯ ಮುಂದುವರಿದಿದೆ.

ಕಡೇಶಿವಾಲಯ ನಿವಾಸಿ ಹೇಮಂತ್ ಆಚಾರ್ಯ( 21) ಎಂಬವರು ಜುಲೈ 28 ರಂದು ಮನೆಯಿಂದ ಕೆಲಸಕ್ಕೆ ಹೋದವರು ನಾಪತ್ತೆಯಾಗಿದ್ದು, ಅವರಿಗೆ ಸೇರಿದ್ದ ದ್ವಿಚಕ್ರ ವಾಹನವೊಂದು ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿ ತೀರದಲ್ಲಿ ಅನಾಥವಾಗಿ ಸಿಕ್ಕಿತ್ತು. ಹಾಗಾಗಿ ಹೇಮಂತ್ ಆಚಾರ್ಯ ಇಲ್ಲಿಯೇ ನಾಪತ್ತೆಯಾಗಿರುವ ಬಗ್ಗೆ ಸಂಶಯಗೊಂಡ ಪೊಲೀಸ್ ಇಲಾಖೆ ಅಗ್ನಿಶಾಮಕ ದಳದ ಸಿಬ್ಬಂದಿ ಮೂಲಕ ನದಿಯಲ್ಲಿ ಹಾಗೂ ಇತರ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ನೇತ್ರಾವತಿ ನದಿ ತೀರದಲ್ಲಿ ತುಂಬೆ, ಸಜೀಪ, ಫರಂಗಿಪೇಟೆವರೆಗೆ ಶೋಧ ಕಾರ್ಯ ಮುಂದುವರೆಸಲಾಗಿದೆ.

ಈ ಕುರಿತು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *