Breaking
14 Jul 2026, Tue

ಸುಳ್ಯದ ಮಹಿಳೆಯ ಸಾಧನೆ: 52 ನೇ ವಯಸ್ಸಿನಲ್ಲಿ ಪಿಯುಸಿ ಉತ್ತೀರ್ಣ

ಸುಳ್ಯ: ಜೀವನದಲ್ಲಿ ಕಲಿಕೆಗೆ ವಯಸ್ಸು ಅಡ್ಡಿಯಾಗದು ಎಂಬುದನ್ನು 52 ವರ್ಷದ ಜಯಂತಿಯವರು ತಮ್ಮ ಸಾಧನೆಯ ಮೂಲಕ ತೋರಿಸಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.

ಜಯಂತಿಯವರು ಸುಳ್ಯದ ಅಜ್ಜಾವರ ಗ್ರಾಮದ ಅಟ್ಲೂರು ನಿವಾಸಿಯಾಗಿದ್ದು, ಅಜ್ಜಾವರ ಗ್ರಾಮ ಪಂಚಾಯತಿನ ಮಾಜಿ ಸದಸ್ಯರಾಗಿದ್ದಾರೆ. ಸುಳ್ಯದ ಶಾರದಾ ವಿದ್ಯಾಲಯ ಮತ್ತು ಪುತ್ತೂರಿನ ಪ್ರಗತಿ ವಿದ್ಯಾ ಸಂಸ್ಥೆಯಿಂದ ಮಾರ್ಗದರ್ಶನ ಪಡೆದು ಪಿಯುಸಿ ಪರೀಕ್ಷೆ ಬರೆದಿದ್ದರು.

ಕಲಾ ವಿಭಾಗವನ್ನು ಆಯ್ಕೆ ಮಾಡಿದ ಜಯಂತಿಯವರು ಒಟ್ಟು 307 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿದುಬಂದಿದೆ. ಕನ್ನಡದಲ್ಲಿ 57, ಇಂಗ್ಲಿಷ್‌ 50, ಇತಿಹಾಸ 55, ಅರ್ಥ ಶಾಸ್ತ್ರ 51, ರಾಜ್ಯ ಶಾಸ್ತ್ರ 50 ಹಾಗೂ ಸಮಾಜ ಶಾಸ್ತ್ರದಲ್ಲಿ 49 ಅಂಕಗಳನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *