Breaking
13 May 2026, Wed

ಚಿಕ್ಕಮಗಳೂರು : ಕ್ವಾಟ್ರಸ್‌ನಲ್ಲೇ ಹೆಡ್‌ಕಾನ್‌ ಸ್ಟೇಬಲ್ ನೇಣಿಗೆ ಶರಣು

ಚಿಕ್ಕಮಗಳೂರು : ಕ್ವಾಟ್ರಸ್‌ನಲ್ಲೇ ಹೆಡ್‌ಕಾನ್‌ ಸ್ಟೇಬಲ್ ಒಬ್ಬರು ನೇಣಿಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಮೃತರನ್ನು ತರೀಕೆರೆ ತಾಲೂಕಿನ ಸುಣ್ಣದಹಳ್ಳಿ ನಿವಾಸಿ ಕಾಂತರಾಜ್(45) ಎಂದು ಗುರುತಿಸಲಾಗಿದೆ.

ಕಾಂತರಾಜ್ ಅವರು ಚಿಕ್ಕಮಗಳೂರು ಎಸ್‌ಪಿ ಕಚೇರಿಯಲ್ಲಿ ಕಂಪ್ಯೂಟರ್ ಸೆಕ್ಷನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಕುಟುಂಬದ ಸದಸ್ಯರು ಊರಿಗೆ ತೆರಳಿದ್ದ ವೇಳೆ ಕ್ವಾಟ್ರಸ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ನಡೆದ ಅಪಘಾತವೊಂದರಲ್ಲಿ ಕಾಂತರಾಜ್ ತನ್ನ ಬಲಗಾಲು ಕಳೆದುಕೊಂಡಿದ್ದು, ಕೃತಕ ಕಾಲು ಜೋಡಿಸಲಾಗಿತ್ತು. ಕಾಲು ಕಳೆದುಕೊಂಡ ಬಳಿಕ ಅವರು ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *