ಬೆಂಗಳೂರು: ಪರಿಸರಕ್ಕೆ ಹಾನಿಕಾರಕವಾಗಿರುವ ಪಾಲಿಥಿನ್ ಹಾಲಿನ ಪ್ಯಾಕೆಟ್‌ಗಳ ಬದಲಾಗಿ, ಪರಿಸರ ಸ್ನೇಹಿ ಬಯೋಡಿಗ್ರೇಡಬಲ್ ಹಾಲಿನ ಕವರ್‌ಗಳನ್ನು ಬಳಸಲು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್) ಹೆಜ್ಜೆ ಇಟ್ಟಿದೆ.

ಬೆಂಗಳೂರು ಹಾಲು ಒಕ್ಕೂಟದ ಈ ಉಪಕ್ರಮವು ಕೇವಲ ಇತಿಹಾಸದಲ್ಲಿ ಮಾತ್ರವಲ್ಲ, ದೇಶದ ಹಾಲು ಉದ್ಯಮದಲ್ಲಿಯೂ ಐತಿಹಾಸಿಕ ಹೆಜ್ಜೆಯಾಗಿ ಪರಿಗಣಿಸಿದೆ.

ಪ್ರಾಯೋಗಿಕ ಹಂತವಾಗಿ ಇದೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಹೊಸ ಮಾದರಿಯ ನಂದಿನಿ ಹಾಲಿನ ಪ್ಯಾಕೆಟ್ ಬಿಡುಗಡೆಗೊಳ್ಳಲಿದೆ. ಈ ಪ್ರಕ್ರಿಯೆಯು ಹಂತ ಹಂತವಾಗಿ ಕರ್ನಾಟಕದಾದ್ಯಂತ ವ್ಯಾಪಿಸಲಿದೆ.
ಪ್ರಸ್ತುತ ಬಳಕೆಯಲ್ಲಿರುವ ಪಾಲಿಥಿನ್ ಹಾಲಿನ ಪ್ಯಾಕೆಟ್‌ಗಳು ಮಣ್ಣಿನಲ್ಲಿ ಕರಗಲು ನೂರಾರು ವರ್ಷಗಳ ಅಗತ್ಯವಿದೆ. ಹೀಗಾಗಿ ಪರಿಸರ ರಕ್ಷಣೆಯ ಹಿತದೃಷ್ಟಿಯಿಂದ ಈ ಬದಲಾವಣೆಯನ್ನು ತರಲಾಗಿದೆ.


