Breaking
14 Jul 2026, Tue

ಗಂಗೊಳ್ಳಿ ದೋಣಿ ದುರಂತ: ಓರ್ವನ ಶವ ಪತ್ತೆ

ಉಡುಪಿ : ಗಂಗೊಳ್ಳಿಯ ಹಳೆ ಅಳಿವೆ ಪ್ರದೇಶದಲ್ಲಿ ದೋಣಿ ಮಗುಚಿ ನೀರುಪಾಲಾಗಿದ್ದ ಮೂವರು ಮೀನುಗಾರರ ಪೈಕಿ ಓರ್ವನ ಶವ ಇಂದು (ಜು.16) ಬೆಳಗ್ಗೆ ಪತ್ತೆಯಾಗಿದೆ.

ಲೋಹಿತ್‌ ಖಾರ್ವಿ(39) ಅವರ ಶವವನ್ನು ಇಂದು ಬೆಳಗಿನ ಜಾವ 4.30 ರ ಸುಮಾರಿಗೆ ಮುಳುಗು ತಜ್ಞ ದಿನೇಶ್ ಖಾರ್ವಿ ಅವರ ತಂಡ ಕೋಡಿ ಕಡಲ ತೀರದಲ್ಲಿ ಪತ್ತೆ ಹಚ್ಚಿದೆ.

ಮಂಗಳವಾರ ತೂಫಾನ್‌ಗೆ ಸಿಲುಕಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ನಾಲ್ವರು ಮೀನುಗಾರರು ನೀರು ಪಾಲಾಗಿದ್ದರು. ಇದರಲ್ಲಿ ಓರ್ವನನ್ನು ಬೇರೊಂದು ದೋಣಿಯ ಮೀನುಗಾರರು ರಕ್ಷಿಸಿದ್ದು, ಆದರೆ ಮೂವರು ನೀರುಪಾಲಾಗಿದ್ದರು.

ಈ ಘಟನೆಯಲ್ಲಿ ಇನ್ನೂ ಇಬ್ಬರು ಮೀನುಗಾರರು ಪತ್ತೆಯಾಗಬೇಕಿದ್ದು, ಶೋಧ ಕಾರ್ಯ ಮುಂದುವರಿದಿದೆ.

Leave a Reply

Your email address will not be published. Required fields are marked *