Breaking
14 Jul 2026, Tue

ಸುಳ್ಯ: ಮನೆಯ ಕಾಂಪೌಂಡ್ ಗೆ ಕಾರು ಡಿಕ್ಕಿ: ಪ್ರಯಾಣಿಕರು ಅಪಾಯದಿಂದ ಪಾರು

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮನೆಯ ಕಾಂಪೌಂಡ್ ಡಿಕ್ಕಿಯಾದ ಘಟನೆ ಗೂನಡ್ಕ ಬಳಿ ಜು. 16 ರಂದು ಸಂಭವಿಸಿದೆ.

ಬೆಂಗಳೂರಿನಿಂದ ಸಂಪಾಜೆ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಕೇರಳದ ಮೂಲದ ಕಾರು ಗೂನಡ್ಕದ ಶಿರಾಡಿ ಬೈಲೆ ದೈವಸ್ಥಾನಕ್ಕೆ ಹೋಗುವ ದ್ವಾರದ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಹೀಂ ಬೀಜದ ಕಟ್ಟೆ ಅವರ ಮನೆಯ ಕಾಪೌಂಟ್ ಗೆ ಗುದ್ದಿದೆ. ಪರಿಣಾಮ ಕಾಂಪೌಂಡ್ ಗೆ ಹಾನಿಯಾಗಿದ್ದು, ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ.

ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *