Breaking
19 Sep 2026, Sat

ಅತ್ಯಾಚಾರ ಆರೋಪ : ಪೊಲೀಸ್ ಕಾನ್ಸ್‌ಟೇಬಲ್ ಬಂಧನ

ಮಂಗಳೂರು: ಕಾವೂರು ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿದ್ದ ಚಂದ್ರ ನಾಯಕ್ ಎಂಬವರ ಮೇಲೆ ಅತ್ಯಾಚಾರ ಆರೋಪದ ಬಗ್ಗೆ ಮಹಿಳೆಯೋರ್ವರು ಪೊಲೀಸ್‌ ಕಮಿಷನರ್‌ ಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಮಹಿಳೆಯೊಬ್ಬರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಮಂಗಳೂರಿನ ಕಂಕನಾಡಿ ಪೊಲೀಸರು ಬುಧವಾರ (ಜು.16) ಬಂಧಿಸಿದ್ದಾರೆ.

ಈ ಕುರಿತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Leave a Reply

Your email address will not be published. Required fields are marked *