ಬಂಟ್ವಾಳ : ಧಾರಾಕಾರ ಮಳೆಯ ಪರಿಣಾಮ ಮನೆ ಮೇಲೆ ಹಲಸಿನ ಮರ ಬಿದ್ದ ಘಟನೆ ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ಎಂಬಲ್ಲಿ ಜು.15 ರಂದು ನಡೆದಿದೆ .

ಬಡಗ ಬೆಳ್ಳೂರು ಗ್ರಾಮದ ಪಲ್ಲಿಪಾಡಿ ಮೋಹಿನಿ ಅವರಿಗೆ ಸೇರಿದ ಮನೆಯ ಮೇಲೆ ಮರ ಬಿದ್ದು ಮೇಲ್ಛಾವಣಿ ಸಂಪೂರ್ಣ ಜಖಂಗೊಂಡು ಗೋಡೆಗಳಿಗೂ ತೀವ್ರ ಹಾನಿಯಾಗಿದೆ.
ಆದರೆ ಮನೆಯವರು ಅಪಾಯದಿಂದ ಪಾರಾಗಿದ್ದು, ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.




