Breaking
20 Sep 2026, Sun

ಉಡುಪಿಯ ಪಡುಕೆರೆ ಕಡಲತೀರದಲ್ಲಿ ಮೀನುಗಾರಿಕಾ ದೋಣಿ ಮಗುಚಿ ಓರ್ವ ಮೀನುಗಾರ ಸಾವು

ಉಡುಪಿ: ಪಡುಕೆರೆ ಕಡಲತೀರದಲ್ಲಿ ಸಮುದ್ರದಲ್ಲಿನ ಅಲೆಗಳ ತೀವ್ರ ಅಬ್ಬರದಿಂದಾಗಿ ಮೀನುಗಾರಿಕಾ ದೋಣಿ ಮಗುಚಿ ಓರ್ವ ಮೀನುಗಾರ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿ ಪಿತ್ರೋಡಿ ನಿವಾಸಿ ನೀಲು (48) ಎಂದು ಗುರುತಿಸಲಾಗಿದೆ.

ಸಮುದ್ರದ ಅಲೆಗಳು ಬಲವಾಗಿ ಬೀಸುತ್ತಿದ್ದ ಸಂದರ್ಭದಲ್ಲಿ ದೋಣಿ ಮಗುಚಿ ನೀಲು ಸಮುದ್ರಕ್ಕೆ ಎಸೆಯಲ್ಪಟ್ಟಿದ್ದಾರೆ. ಈ ವೇಳೆ ಅವರು ಮೀನುಗಾರಿಕಾ ಬಲೆ ಹಾಗೂ ಇತರ ಸಲಕರಣೆಗಳಲ್ಲಿ ಸಿಲುಕಿದ ಕಾರಣ, ನೀರಿನಿಂದ ಹೊರಬರಲು ಸಾಧ್ಯವಾಗದೇ ಪ್ರಾಣ ಕಳೆದುಕೊಂಡಿದ್ದಾರೆ.

ನೀಲು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *