ಸಂತ ಲೋರೆನ್ಸರ ಚರ್ಚ್ ವಿಜಯಡ್ಕ : ಗಾದ್ಯಾಂತ್ ಏಕ್ ದೀಸ್ ಖೆಳ್2.0  

ವಿಜಯಡ್ಕ : ಗದ್ದೆಯಲ್ಲಿ ಒಂದು ದಿನ ಆಟ 2.0 ಕಾರ್ಯಕ್ರಮ ಕುರೋಡಿಯ ಶ್ರೀ ಎಲ್ಯಾಸ್ ಮೊಂತೇರೋ ಇವರ ಗದ್ದೆಯಲ್ಲಿ ನಡೆಯಿತು.

ಪ್ರಾರ್ಥನಾ ಗೀತೆಯನ್ನು ಹಾಡುವ ಮೂಲಕ ಚರ್ಚ್ ನ    ಗ್ಲೋರಿಯ ಗಾನ ವ್ರೃಂದದ ಸದಸ್ಯರು ದೇವರ ಕೃಪೆಯನ್ನು ಬೇಡಲು ಸಹಕರಿಸಿ, ಚರ್ಚ್ ನ ಧರ್ಮ ಗುರುಗಳು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ ಪ್ರಾರ್ಥನಾ ವಿಧಿಯನ್ನು ನೆರವೇರಿಸಿ ಆಶೀರ್ವದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ, ಮನುಷ್ಯ ದೇವರು ಸೃಷ್ಟಿಸಿದ ಪ್ರಕೃತಿಯ ಪ್ರಮುಖ ಭಾಗ, ಮನುಷ್ಯ ಹಾಗೂ ಪ್ರಕೃತಿಯ ಮಧ್ಯೆ ಹತ್ತಿರವಾದ ಸಂಬಂಧವಿದೆ ನಮ್ಮ ಪೂರ್ವಜರಿಗೆ ಗದ್ದೆಯು ಮನರಂಜನೆ, ಜೀವನ ಹಾಗೂ ಸರ್ವಸ್ವವಾಗಿತ್ತು ಎಂದು ಪೂರ್ವಜರನ್ನು ನೆನಪಿಸಿಕೊಂಡರು.

 ಇಂದು ಕಥೊಲಿಕ್ ಸಭಾ ವಿಜಯಡ್ಕ ಘಟಕವು ಆಯೋಜಿಸಿರುವ ಈ ಕಾರ್ಯಕ್ರಮವು ಸಂತೋಷ ನೀಡುವಂತದ್ದು ಇದನ್ನು ಎಲ್ಲರೂ ಆನಂದಿಸಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶ್ರೀ ಆಲ್ವಿನ್ ಡಿಸೋಜ ಪಾನೀರ್ ಇವರನ್ನು ಸನ್ಮಾನಿಸಲಾಯಿತು . ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಕಥೊಲಿಕ್ ಸಭೆಯ ಧ್ಯೇಯ ಸೇವೆ, ತ್ಯಾಗ ಮತ್ತು ಏಕತೆ ಇದು ಈ ಕಾರ್ಯಕ್ರಮದ ಮೂಲಕ ಜಾರಿಯಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು. ಸನ್ಮಾನಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿ, ಸ್ಪರ್ಧಿಗಳಿಗೆ ಶುಭ ಹಾರೈಸಿದರು.

ಈ ವೇಳೆ ಕಥೊಲಿಕ್ ಸಭಾ ಮಂಗಳೂರು ದಕ್ಷಿಣ ವಲಯದ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಜಯಪ್ರಕಾಶ್ ಡಿಸೋಜ ಹಾಗೂ ಕಥೊಲಿಕ್ ಸಭಾ ವಿಜಯಡ್ಕ ಘಟಕದ ಅಧ್ಯಕ್ಷ ಶ್ರೀ ರಾಜೇಂದ್ರ ಡಿಸೋಜ ಮತ್ತು  ಈ ಸ್ಪರ್ಧೆ ಗೆ ಗದ್ದೆಯನ್ನು ಪ್ರತಿ ವರ್ಷ ನೀಡಿ ಸಹಕರಿಸುವ ಶ್ರೀಎಲ್ಯಾಸ್ ಮೊಂತೇರೊ ಅವರ ಪರವಾಗಿ ಅವರ ಧರ್ಮ ಪತ್ನಿ ಶ್ರೀಮತಿ ಶಾಂತಿ ಮೊಂತೇರೊ ಹಾಗೂ ಐದು ತಂಡಗಳ ಓನರ್ ರವರನ್ನು ಗೌರವಿಸಲಾಯಿತು.

ನಂತರ  ಕಥೊಲಿಕ್ ಸಭಾ ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷ ಶ್ರೀ ಡೋಲ್ಫಿ ಡಿಸೋಜ,  ಕಾರ್ಯದರ್ಶಿ ಶ್ರೀಮತಿ ಟ್ರೆಸ್ಸಿ ರೋಡ್ರಿಗಸ್, ಚರ್ಚ್ ಪಾಲನಾ ಪರಿಷತ್ತಿನ ಉಪಾಧ್ಯಕ್ಷ ಶ್ರೀ ಹೆನ್ರಿ ಡಿಸೋಜ, ಕಾರ್ಯದರ್ಶಿ ಶ್ರೀ ರವಿ ಡಿಸೋಜ, ಕಥೋಲಿಕ್ ಸಭಾ ವಿಜಯಡ್ಕ ಘಟಕದ ಅಧ್ಯಕ್ಷ ಶ್ರೀ ರಾಜೇಂದ್ರ ಡಿಸೋಜ, ಕಾರ್ಯದರ್ಶಿ ಶ್ರೀಮತಿ ವೀರ ಡಿಸೋಜ, ಕಾರ್ಯಕ್ರಮದ ಸಂಚಾಲಕ ಶ್ರೀ ಜೋನ್ ಮೊಂತೇರೊ ಮತ್ತು ಸಮುದಾಯ ಆರೋಗ್ಯ ಅಧಿಕಾರಿ ಡಾಕ್ಟರ್ ಸರಬೈಯನ್ ಉಪಸ್ಥಿತರಿದ್ದರು.

 ಘಟಕದ ಅಧ್ಯಕ್ಷ ಶ್ರೀ ರಾಜೇಂದ್ರ ಡಿಸೋಜ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ವೀರ ಡಿಸೋಜ ವಂದಿಸಿ, ನಿಕಟಪೂರ್ವ ಅಧ್ಯಕ್ಷ ಹಾಗೂ ಖ್ಯಾತ ನಿರೂಪಕ ಶ್ರೀ ಜೀವನ್ ಪ್ರಕಾಶ್ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *