Breaking
20 Sep 2026, Sun

ಗುರುವಾಯನಕೆರೆಯಲ್ಲಿ ವೈಯಕ್ತಿಕ ದ್ವೇಷಕ್ಕೆ ಬ್ಯಾನರ್ಗೆ ಬೆಂಕಿ ಹಚ್ಚಿದ ಭೂಪ

ಬೆಳ್ತಂಗಡಿ: ತಾಲೂಕಿನ ಗುರುವಾಯನಕೆರೆಯಲ್ಲಿರುವ ಅಂಗಡಿಯೊ೦ದರ ಬದಿಯಲ್ಲಿ ಜಾಹೀರಾತು ಇರಿಸಿದ್ದ ಬ್ಯಾನರ್ ಗೆ ಬೆಂಕಿ ಹಚ್ಚಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬ೦ಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ತೆಂಕಕಾರ೦ದೂರು ಗ್ರಾಮದ ಕಟ್ಟೆ ನಿವಾಸಿ ಉಮೇಶ್ ಬಂಗೇರ (29) ಎಂದು ಗುರುತಿಸಲಾಗಿದೆ.

ಉಮೇಶ್ ಬಂಗೇರ ಹೊಟೇಲ್ ವೊಂದನ್ನು ನಡೆಸುತ್ತಿದ್ದು, ಸದಕತುಲ್ಲಾ ಎಂಬವರ ಜಿ.ಕೆ.ಸ್ಟೋರ್ ಹೆಸರಿನ ಅಂಗಡಿಯಲ್ಲಿ ತರಕಾರಿ ಖರೀದಿ ಮಾಡಿ 38 ಸಾವಿರ ಬಾಕಿ ಹಣ ಕೊಡದೇ, ಬಾಕಿ ಉಳಿಸಿಕೊಂಡಿದ್ದ. ಜುಲೈ. 9 ರಂದು ಅಂಗಡಿ ಮಾಲೀಕರು ನೇರವಾಗಿ ಉಮೇಶ್ ಅವರಿಗೆ ಕರೆ ಮಾಡಿ ಹಣ ಕೊಡುವಂತೆ ಮನವಿ ಮಾಡಿದ್ದಾರೆ.ಈ ವಿಚಾರದಿಂದ ಕೋಪಗೊಂಡು ಬೆಂಕಿ ಹಚ್ಚಿರುವುದಾಗಿ ಪೊಲೀಸ್ ತನಿಖೆಯ ವೇಳೆ ಆರೋಪಿ ಉಮೇಶ್ ಬಾಯಿಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಬೆಳ್ತ೦ಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *