ಪ್ರಶಸ್ತಿ ವಿಜೇತ ತೆಲಿಕೆದ ಕಲಾವಿದೆರ್ ಕೊಯಿಲ ತಂಡದ “ಅಯೋಧ್ಯೆ” ನಾಟಕದ ಶೀರ್ಷಿಕೆ ಬಿಡುಗಡೆ

ಬಂಟ್ವಾಳ: “ರಂಗ ಸಾರಥಿ” ಪುರುಷೋತ್ತಮ ಕೊಯಿಲ ಸಾರಥ್ಯದ, ಪ್ರಶಸ್ತಿ ವಿಜೇತ ತೆಲಿಕೆದ ಕಲಾವಿದೆರ್ ಕೊಯಿಲ ಅಭಿನಯಿಸುವ ಗೆಂದಗಿಡಿ ನಾಟಕದ ಯಶಸ್ವಿಯ ನಂತರ ತುಳು ರಂಗಭೂಮಿ ಮತ್ತೊಂದು ವಿಬಿನ್ನ ಪ್ರಯತ್ನದ ಅದ್ದೂರಿ ರಂಗ ವಿನ್ಯಾಸದ ನಾಟಕದ ಶೀರ್ಷಿಕೆ ಬಿಡುಗಡೆ ಸಮಾರಂಭವು ಇಂದು(ಜು. 11) ರಂದು ಕೃಷ್ಣಾರಾಧ್ಯಂ ಬ್ರಹ್ಮರಕೊಟ್ಲುವಿನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಖ್ಯಾತ ಜ್ಯೋತಿಷಿ ಅನಿಲ್ ಪಂಡಿತ್ ದೀಪ ಬೆಳಗಿ ಚಾಲನೆಯನ್ನು ನೀಡಿದರು. ಬಳಿಕ ಈ ವರ್ಷದ ಹೊಸ ನಾಟಕ ಅಯೋಧ್ಯೆ ಇದರ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಗೆಂದಗಿಡಿ ಖ್ಯಾತಿಯ ದಿನೇಶ್ ಸಾಲಿಯಾನ್ ಕನಪಾದೆ ಇವರ ರಚನೆ ಮತ್ತು ನಿರ್ದೇಶನವಿದೆ. ರಂಗ ಸಾರಥಿ ಪುರುಷೋತ್ತಮ ಕೊಯಿಲ ಇವರ ನಿರ್ಮಾಣದಲ್ಲಿ ಮೂಡಿ ಬರಲಿರುವ ಈ ನಾಟಕಕ್ಕೆ ಅಕ್ಷಯ್ ಕಾವಲಕಟ್ಟೆ ಸಂಗೀತ ನೀಡಿದ್ದಾರೆ. ಈ ನಾಟಕವು ನವೆಂಬರ್ ತಿಂಗಳಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ.

ಈ ಸಂದರ್ಭದಲ್ಲಿ ಮಂಗಳೂರು ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸುರೇಶ್ ಕೆಮ್ಮಟ್ಟೆ, ಪುರುಷೋತ್ತಮ್ ಕೊಯಿಲ, ದಿನೇಶ್ ಸಾಲ್ಯಾನ್ ಕನಪಾದೆ, ಗುರುರಾಜ್ ಕುಕ್ಕಿಪ್ಪಾಡಿ, ಅಕ್ಷಯ್‌ ಕಾವಳಕಟ್ಟೆ ಸೇರಿದಂತೆ ತಾಂತ್ರಿಕ ವರ್ಗದವರು, ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *