Breaking
20 Sep 2026, Sun

ಹಸು ಕಳ್ಳತನ ಮಾಡಿ ಹತ್ಯೆ ಮಾಡಿದ ಆರು ಆರೋಪಿಗಳ ಬಂಧನ

ಚಿಕ್ಕಮಂಗಳೂರು: ಕೊಟ್ಟಿಗೆಯೊಂದರಲ್ಲಿ ಹಸವನ್ನು ಕದ್ದೊಯ್ದು ಕೊಂದ ಘಟನೆ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ನಡೆದಿದೆ.

ಆರೋಪಿಗಳನ್ನು ಅಜೀರ್ ಅಕ್ಮಲ್, ಅಕ್ಕಾಸ್ ಅಲಿ, ನಜ್ರುಲ್ ಹಕ್ ಹಾಗೂ ಇಜಾಬುಲ್ ಹಕ್, ಮೆಹರ್ ಅಲಿ, ಮಂಜುಲ್ ಹಕ್ ಎಂದು ಗುರುತಿಸಲಾಗಿದೆ.

ಅಸ್ಸಾಂ ಮೂಲದ ಕಾಫಿ ತೋಟದ ಕಾರ್ಮಿಕರು ತಮ್ಮ ಕೊಟ್ಟಿಗೆಯಲ್ಲಿ ಹಸುವೊಂದನ್ನು ಕಟ್ಟಿಹಾಕಿದ್ದರು. ಈ ವೇಳೆ ಆರು ಮಂದಿ ಆರೋಪಿಗಳು ಹಸುವನ್ನು ಕಳ್ಳತನ ಮಾಡಿದ್ದರು.

ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ, ಆರೋಪಿಗಳು ಹಸು ಮಾಂಸವನ್ನು ಬೇರ್ಪಡಿಸುತ್ತಿದ್ದ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಈ ಕುರಿತು ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *