ಕಾಸರಗೋಡು: ಕಾಸರಗೋಡು ಪ್ರೆಸ್ ಕ್ಲಬ್ ಜಂಕ್ಷನ್ ಬಳಿ ಟ್ರೈಲರ್ ನಡಿಗೆ ಬೈಕ್ ಸಿಲುಕಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು (ಜು.10) ಮುಂಜಾನೆ ನಡೆದಿದೆ.

ಗಾಯಗೊಂಡಿರುವವರು ಇರಿಯಣ್ಣಿಯ ರಂಜೀಶ್ (35) ಹಾಗೂ ಪ್ರಸಾದ್ ( 45) ಗಂಭೀರ ಎಂದು ಗುರುತಿಸಲಾಗಿದೆ.

ಬೈಕ್ ಎದುರಿನಿಂದ ಬರುತ್ತಿದ್ದ ಟ್ರೈಲರ್ ನಡಿಗೆ ಸಿಲುಕಿ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ತಕ್ಷಣವೇ ದಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಹರ ಸಾಹಸ ಪಟ್ಟು ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.




