ಸುಳ್ಯದಲ್ಲಿ ಕಾರು-ಬಸ್‌ ಮುಖಾಮುಖಿ ಡಿಕ್ಕಿ: ಅಪಾಯದಿಂದ ಪಾರಾದ ಪ್ರಯಾಣಿಕರು

ಸುಳ್ಯ: ಕಾರು ಹಾಗೂ ಕೆಎಸ್ಸಾರ್ಟಿಸಿ ಬಸ್‌ ಢಿಕ್ಕಿ ಹೊಡೆದು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಮಾಣಿ -ಮೈಸೂರು ಹೆದ್ದಾರಿಯ ಜಾಲ್ಸೂರಿನ ಬೊಳುಬೈಲು ಸಮೀಪ ಜೂನ್‌ 06 ರಂದು ನಡೆದಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಹುಣಸೂರು ನಿವಾಸಿಗಳಾದ ಕಾರ್ತಿಕ್‌, ರವಿ, ಮಂಜು ಹಾಗೂ ದೀಪಕ್‌ ಕುಮಾರ್‌ ಅವರು ಬೆಳ್ತಂಗಡಿಗೆ ತೆರಳುತ್ತಿದ್ದರು ಬಸ್‌ ಮಂಗಳೂರಿನಿಂದ ಮೈಸೂರು ಕಡೆಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊಂಡಗೊಂಡಿದೆ ಎನ್ನಲಾಗಿದೆ.

ಅಪಘಾತದಲ್ಲಿ ಅದೃಷ್ಟವಶಾತ್‌ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *