Breaking
19 Sep 2026, Sat

ಬಂಟ್ವಾಳ: ಭಾರೀ ಮಳೆಗೆ ಹಲವೆಡೆ ಹಾನಿ

ಬಂಟ್ವಾಳ: ತಾಲೂಕಿನಲ್ಲಿ ಮಳೆ ಹೆಚ್ಚಾದ ಹಿನ್ನೆಲೆ ಹಲವೆಡೆ ಮನೆಗಳಿಗೆ ಹಾನಿಯಾಗಿದೆ.

ನೆಟ್ಲಮುನ್ನೂರು ಗ್ರಾಮದ ಏಮಾಜೆ ಭಜನಾ ಮಂದಿರದ ಬಳಿ ನಿವಾಸಿ ದೇವಪ್ಪ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಒಂದು ಬದಿಯ ಮೇಲ್ಬಾವಣಿ ಹಾಗೂ ಗೋಡೆಗೆ ಹಾನಿಯಾಗಿದೆ.

ತೆಂಕಬೆಳ್ಳೂರು ಗ್ರಾಮದ ಕುಸುಮ ಪೂಜಾರಿ ಅವರ ಮನೆ ಗೋಡೆಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದೆ. ಉಳಿದಂತೆ ತಾಲೂಕಿನ ಅಳಿಕೆ, ಇಡ್ತಿದು, ವಿಟ್ಲ ಕಸ್ಟಾ ಗ್ರಾಮದ ಕೊಳಂಬೆಯಲ್ಲಿ ಮನೆಗಳಿಗೆ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *