Breaking
19 Sep 2026, Sat

ಉಪ್ಪಿನಂಗಡಿ: ಲಾರಿ ಹಾಗೂ ಈಚರ್‌ ನಡುವೆ ಅಪಘಾತ : ಚಾಲಕನಿಗೆ ಗಂಭೀರ ಗಾಯ

ಉಪ್ಪಿನಂಗಡಿ : ಲಾರಿ ಹಾಗೂ ಈಚರ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈಚರ್‌ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ಜು.5 ರಂದು ನಡೆದಿದೆ.

ಗಾಯಗೊಂಡಿರುವವರು ಚನ್ನರಾಯಪಟ್ಟಣ ತಾಲೂಕಿನ ನವಿಲುಹೂಸೂರು ಗ್ರಾಮದ ನಿವಾಸಿ ನಟರಾಜ್‌ (48) ಎಂದು ಗುರುತಿಸಲಾಗಿದೆ.

ನಜ್ಜುಗುಜ್ಜಾದ ಈಚರ್‌ನಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಹೊರತೆಗೆದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೊಂದು ಲಾರಿ ಚಾಲಕ ಹಾಸನದ ಆಲೂರು ಮೂಲದ ಶಶಿ (26) ಎಂಬವರು ಅಪಾಯದಿಂದ ಪಾರಾಗಿದ್ದಾರೆ.

ಮಂಗಳೂರಿನಿಂದ ಬೆಂಗಳೂರಿಗೆ ಪ್ಲಾಸ್ಟಿಕ್‌ ಮಣಿ ಸಾಗಿಸುತ್ತಿದ್ದ ಈಚರ್‌ ಲಾರಿ ಬರ್ಚಿನಹಳ್ಳ ತಲುಪುತ್ತಿದ್ದಂತೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ.

ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ .

Leave a Reply

Your email address will not be published. Required fields are marked *