Breaking
19 Sep 2026, Sat

ಆರಂಬೋಡಿ: ಜುಲೈ 6 ಬಿರ್ವೆರೆ ಕೂಟ ಆರಂಬೋಡಿ ಆಶ್ರಯದಲ್ಲಿ ʼಬೆನ್ನಿದ ಕಂಡೊಡು ಕೆಸರ್ದ ಗೊಬ್ಬುʼ ಕೆಸರು ಗದ್ದೆ ಕ್ರೀಡಾಕೂಟ

ಆರಂಬೋಡಿ: ಬಿರ್ವೆರೆ ಕೂಟ ಆರಂಬೋಡಿ ಇವರ ಆಶ್ರಯದಲ್ಲಿ “ಬೆನ್ನಿದ ಕಂಡೊಡು ಕೆಸರ್ದ ಗೊಬ್ಬು” ಉತ್ಸವವು ಜುಲೈ 6, 2025 ರಂದು ಆರಂಬೋಡಿಯ ಕೈರೋಡಿ ಬಾಕಿಮಾರು ಗದ್ದೆಯಲ್ಲಿ ವಿಜೃಂಭಣೆಯಿಂದ ಜರುಗಲಿದೆ.

ಬೆಳಗ್ಗೆ 8.30ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪುರುಷರು ಹಾಗೂ ಮಹಿಳೆಯರಿಗಾಗಿ ವಿವಿಧ ಹಗ್ಗಜಗ್ಗಾಟ, ವಾಲಿಬಾಲ್,ತ್ರೋಬಾಲ್, ರಿಲೆ ರೇಸ್ ಮತ್ತು ಮನೋರಂಜನೆ ಆಟೋಟ ಸ್ಪರ್ಧೆಗಳು ಆಯೋಜಿಸಲಾಗಿದೆ. ಮಕ್ಕಳಿಗಾಗಿ ವಿಶೇಷ ಮನೋರಂಜನೆ ಆಟೋಟ ಸ್ಪರ್ಧೆಗಳೂ ಇರಲಿವೆ.

ಸಂಜೆ 4.00ಗಂಟೆಗೆ ಕಂಬಳ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಇರುವೈಲು ಪಾಣಿಲ ಬಾಡ ಪೂಜಾರಿಯವರ ತಾಟೆ ಮತ್ತು ಬೊಟ್ಟಿಮಾರ್ ಕೋಣಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *