Breaking
19 Sep 2026, Sat

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಪುತ್ತೂರು ಘಟಕದ ಸಭೆ

ಪುತ್ತೂರು : ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ.ರಿ ಮೆಲ್ಕಾರ್ ಬಂಟ್ವಾಳ ಇದರ ಪುತ್ತೂರು ಘಟಕದ ಸಭೆಯು ಪುತ್ತೂರಿನ ಸ್ವಾಗತ ಹೋಟೆಲ್ ನಲ್ಲಿ ಜರಗಿತು. ಪ್ರತಿಷ್ಠಾನದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಕಯ್ಯೂರು ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಆಳ್ವ ಪಡುಮಲೆ ಮಾತನಾಡಿ ಆಗಸ್ಟ್ 17 ರಂದು ಪಡುಮಲೆ ಕೂವೆ ಶ್ರೀ ಶಾಸ್ತರ ದೇವಸ್ಥಾನದಲ್ಲಿ ಜರಗಲಿರುವ ಜಿಲ್ಲಾಮಟ್ಟದ ಹಿರಿಯರ ಕಾರ್ಯಾಗಾರದಲ್ಲಿ ಮೂರು ವಿಚಾರಗೋಷ್ಠಿ, ಸನ್ಮಾನ ಮತ್ತು ಪ್ರತಿಷ್ಠಾನದ ಸದಸ್ಯರಿಂದ ತಾಳಮದ್ದಳೆಯನ್ನು ನಡೆಸಲಾಗುವುದೆಂದು ತಿಳಿಸಿದರು.

ಜಿಲ್ಲಾ ಸಂಚಾಲಕ ಭಾಸ್ಕರ ಬಾರ್ಯ ಮಾತನಾಡಿ ಹಿರಿಯರಿಗೆ ಮತ್ತು ಸಮಾಜಕ್ಕೆ ಉಪಯುಕ್ತ ಕಾರ್ಯಕ್ರಮ ನಡೆಸಲು ಪುತ್ತೂರು ಘಟಕವು ಮಾದರಿಯಾಗಿದೆಯೆಂದರು.

ಸಭೆಯಲ್ಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಪದ್ಮನಾಭ ನಾಯಕ್, ಗುಂಡ್ಯಡ್ಕ ಈಶ್ವರ ಭಟ್, ವೇದವ್ಯಾಸ ರಾಮಕುಂಜ,ಟಿ. ಸದಾಶಿವ ರೈ,ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ವತ್ಸಲಾ ರಾಜ್ನಿ, ಚಂಚಲಾಕ್ಷಿ. ಎಸ್, ಪ್ರೇಮಲತಾ ರಾವ್ ಬೊಳುವಾರು ಉಪಸ್ಥಿತರಿದ್ದರು.

ಶ್ರೀಮತಿ ಶಂಕರಿ ಶರ್ಮ ಪ್ರಾರ್ಥಿಸಿದರು. ಚಂದ್ರಶೇಖರ ಆಳ್ವ ಸ್ವಾಗತಿಸಿ ಭವಾನಿ ಶಂಕರ ಶೆಟ್ಟಿ ಪುತ್ತೂರು ವಂದಿಸಿದರು. ಕೇಂದ್ರ ಸಮಿತಿಯ ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *