Breaking
2 Sep 2026, Wed

ಉಪ್ಪಿನಂಗಡಿ: ಮನೆಯಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ; ಅಸಹಜ ಸಾವು ಪ್ರಕರಣ ದಾಖಲು

ಉಪ್ಪಿನಂಗಡಿ: ನೆಲ್ಯಾಡಿ ಗ್ರಾಮದ ಹೊಸಮನೆ ಎಂಬಲ್ಲಿ 27 ವರ್ಷದ ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಸೋಮಶೇಖರ್ ಎಚ್. (27) ಎಂದು ಗುರುತಿಸಲಾಗಿದೆ. ಜುಲೈ 9ರ ರಾತ್ರಿ 1 ಗಂಟೆಯಿಂದ ಬೆಳಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತರು ತಮ್ಮ ಮಲಗುವ ಕೊಠಡಿಯಲ್ಲಿ ಬೈರಾಸನ್ನು ಅಡ್ಡಕ್ಕೆ ಕಟ್ಟಿ ನೇಣು ಬಿಗಿದಿದ್ದರೆನ್ನಲಾಗಿದ್ದು, ಅದು ತುಂಡಾಗಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ನೆಲದಲ್ಲಿದ್ದ ಗಾಜಿನ ಚೂರುಗಳು ತಾಗಿ ಸ್ಥಳದಲ್ಲೇ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕೊಠಡಿಯಲ್ಲಿ ಗಾಜಿನ ಚೂರುಗಳು ಹೇಗೆ ಬಂದವು ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.

ಬೆಳಗ್ಗೆ ಕುಟುಂಬಸ್ಥರು ಎದ್ದಾಗ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯರ ಸಹಕಾರದೊಂದಿಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತರ ತಂದೆ ಗಣಪಯ್ಯ ನೀಡಿದ ದೂರಿನ ಆಧಾರದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *