Breaking
19 Sep 2026, Sat

ವರ್ಕಾಡಿಯಲ್ಲಿ ಮನೆ ಮೇಲೆ ಗುಂಡಿನ ದಾಳಿ: ಅಪಾಯದಿಂದ ಪಾರಾದ ಕುಟುಂಬ

ಕಾಸರಗೋಡು: ಮನೆಯೊಂದಕ್ಕೆ ಗುಂಡಿನ ದಾಳಿ ನಡೆದಿದ್ದು, ಮನೆಯವರು ಅಪಾಯದಿಂದ ಪಾರಾದ ಘಟನೆ ವರ್ಕಾಡಿಯಲ್ಲಿ ಇಂದು(ಜೂನ್ 03) ಮುಂಜಾನೆ ನಡೆದಿದೆ.

ವರ್ಕಾಡಿ ಜಂಕ್ಷನ್ ಸಮೀಪದ ನಲ್ಲೆಂಗಿಪದವಿನ ಬಿ. ಎಂ ಹರೀಶ್ ರವರ ಮನೆಗೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ.

ಮುಂಜಾನೆ ಎರಡೂವರೆ ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿದ್ದು, ಮನೆಯ ಕಿಟಕಿಯ ಗಾಜುಗಳು ಒಡೆಯುವ ಶಬ್ದ ಕೇಳಿದ ಕುಟುಂಬದವರು ಬೆದರಿ ಹೊರಗೆ ಬಂದು ನೋಡಿದಾಗ ದುಷ್ಕರ್ಮಿಗಳು ಕಾರು ಮತ್ತು ಬೈಕ್ ನಲ್ಲಿ ಪರಾರಿಯಾಗಿದ್ದಾರೆ ಎಂದು ಎಂದು ಹರೀಶ್ ಮಂಜೇಶ್ವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಮಂಜೇಶ್ವರ ಠಾಣಾ ಪೊಲೀಸರು ಧಾವಿಸಿ ತನಿಖೆ ನಡೆಸಿದ್ದಾರೆ. ಫಾರೆನ್ಸಿಕ್ ತಜ್ಞರು ಮಾಹಿತಿ ಪ್ರಕಾರ ಈ ಪ್ರದೇಶದಲ್ಲಿ ಹಂದಿ ಗಳ ಕಾಟ ಹೆಚ್ಚಾಗಿದ್ದು,ಬೇಟೆಗಾರರು ಹಾರಿಸಿದ ಗುಂಡು ಗುರಿತಪ್ಪಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *