Breaking
11 Jul 2025, Fri

ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಯುವಕನ ಬಂಧನ

ಉಳ್ಳಾಲ: ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದ ಅಪ್ರಾಪ್ತೆಯೊಬ್ಬಳನ್ನು ಯುವಕನೋರ್ವ ಕರೆದೊಯ್ದು ಸೋಮೇಶ್ವರ ಸಮುದ್ರ ತೀರದಲ್ಲಿ ಕಾರೊಳಗಡೆಯೇ ಅತ್ಯಾಚಾರವೆಸಗಿರುವ ಘಟನೆ ಜೂನ್ 27 ರ ಶುಕ್ರವಾರದಂದು ನಡೆದಿದೆ.

ಆರೋಪಿಯನ್ನು ಅಡ್ಯಾರ್ ವಳಚ್ಚಿಲ್ ನಿವಾಸಿ ಕೆಲ್ವಿನ್ (24) ಎಂದು ಗುರುತಿಸಲಾಗಿದೆ.

ಪಿಯುಸಿ ಪೂರ್ಣಗೊಳಿಸಿದ ನಂತರ ನರ್ಸಿಂಗ್ ಕಲಿಯುತ್ತಿರುವ ಅಪ್ರಾಪ್ತೆಯನ್ನು ಇನ್ಸ್ಟಾಗ್ರಾಮ್ ಮೂಲಕ ಪರಿಚಯಿಸಿಕೊಂಡಿದ್ದ ಕೆಲ್ವಿನ್, ನಾಲ್ಕನೇ ದಿನವೇ ಕಾರಿನಲ್ಲಿ ಭೇಟಿ ಮಾಡಲು ಬಂದಿದ್ದ. ಲಾಡ್ಜ್‌ನಲ್ಲಿ ರೂಮ್ ನೀಡಲಿಲ್ಲ ಎಂಬ ಕಾರಣದಿಂದ, ಕಾರಿನಲ್ಲಿ ಕರೆದೊಯ್ದು ಸಮುದ್ರ ತೀರದಲ್ಲೇ ಕೃತ್ಯ ಎಸಗಿದ್ದಾನೆ.

ನಂತರ ಆಕೆಯ ಮನೆಯವರೆಗೂ ಕಾರಿನಲ್ಲಿ ಬಿಟ್ಟುಹೋಗಿದ್ದಾನೆ. ಬೆಳಗ್ಗೆ ಮತ್ತು ಸಂಜೆ ಕಾರಿನಲ್ಲಿ ಅಪ್ರಾಪ್ತೆಯನ್ನು ಕರೆದೊಯ್ಯುವುದನ್ನು ಮನೆ ಸಮೀಪದವರು ಗಮನಿಸಿದ್ದರು. ರಾತ್ರಿ ಹೊತ್ತಲ್ಲಿ ಅಪ್ರಾಪ್ತೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಬಳಿ ಪರಿಶೀಲಿಸಿದಾಗ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Reply

Your email address will not be published. Required fields are marked *