Breaking
26 Jul 2025, Sat

ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪಥ ಕೃತಿ ಬಿಡುಗಡೆ

ಬಂಟ್ವಾಳ: ಸ್ವಾತಂತ್ರ್ಯಯೋಧ ಡಾ| ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ ಇದರ ಪ್ರಾಯೋಜಕತ್ವದಲ್ಲಿ ಮುದ್ರಣಗೊಂಡ “ಬಾಳಪಥ” ಡಾ| ಅಮ್ಮೆಂಬಳ ಬಾಳಪ್ಪಜನ್ಮ ಶತಾಬ್ದಿ ಸಂಚಿಕೆ ಬಿಡುಗಡೆ ಹಾಗೂ ಅಮೂಲ್ಯ ಸ್ವಸಹಾಯ ಸಂಘದ ಸದಸ್ಯರ ಸಮ್ಮಿಲನ ಸಮಾರಂಭವು ಬಂಟ್ವಾಳ ಬೈಪಾಸ್ ನಲ್ಲಿರುವ ಸಮಾಜ ಸೇವಾ ಸಹಕಾರಿ ಭವನದಲ್ಲಿ ನಡೆಯಿತು.

ಬೆಂಗಳೂರಿನ ಸಾಮಾಜಿಕ ಧುರೀಣ ಮೋಹನ ದೇವ ಆಳ್ವ ಅವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ದಿ. ಅಮ್ಮೆಂಬಳ ಬಾಳಪ್ಪರು ಬಾಲ್ಯದಿಂದಿಂದಲೇ ಸತ್ಯ, ನಿಷ್ಠರಾಗಿದ್ದರಲ್ಲದೆ ಎಲ್ಲಾವರ್ಗದ ಜನರನ್ನು ಪ್ರೀತಿಸಿ ಜನ ಸ್ನೇಹಿಯಾಗಿದ್ದರು. ಬಾಳಪ್ಪರು ಸ್ಥಾಪಿಸಿದ ಸಮಾಜ ಸೇವಾ ಸಹಕಾರಿ ಸಂಘವು ಹಲವರ ಬದುಕಿಗೆ ಬೆಳಕಾಗಿದ್ದು, ಸಂಘವು ರಾಜ್ಯ ವ್ಯಾಪಿಯಾಗಿ ಬೆಳೆಯಲಿ ಎಂದು ಹಾರೈಸಿದರು.

ತುಳು ನಮ್ಮ ಮಾತೃ ಭಾಷೆಯಾದರೆ, ಕನ್ನಡ ಭಾಷೆ ರಾಜ್ಯಕ್ಕೆ ಸಾರ್ವಭೌಮವಾಗಿದ್ದು, ದೇಶದ ಎಲ್ಲಾ ಭಾಷೆಯನ್ನು ಗೌರವಿಸಬೇಕು ಎಂದರು.

ಡಾ। ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಮ್ಮೆಂಬಳ ಆನಂದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಬಿ.ರಮಾನಾಥ ರೈ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಂ ಪೂಜಾರಿ ಅವರು ಬಾಳಪ್ಪರ ಹೋರಾಟದ ದಿನಗಳನ್ನು ಸ್ಮರಿಸಿದರು.

ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ, ಸಂಚಿಕೆಯ ಪ್ರಧಾನ ಸಂಪಾದಕ ಡಾ. ದುಗ್ಗಪ್ಪ ಕಜೆಕಾ‌ರ್, ನಿವೃತ್ತ ಯೋಧ ಚಂದಪ್ಪ ಮೂಲ್ಯ, ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಚ ಸುರೇಶ್ ಕುಲಾಲ್ , ಉಪಾಧ್ಯಕ್ಷ ಜನಾರ್ದನ ಬೊಂಡಾಲ, ಹಿರಿಯ ನಿರ್ದೇಶಕ‌ ಬೋಜ ಕುಲಾಲ್ ಉಪಸ್ಥಿತರಿದ್ದರು.

ಭೋಜ ಮೂಲ್ಯ ಪ್ರಸ್ತಾವನೆಗೈದರು. ಕಿರಣ್ ಕಿಟ್ಲೂರು ಸ್ವಾಗತಿಸಿ, ಮೋಹನ್ ಕುಮಾರ್ ನಿರೂಪಿಸಿದರು.

Leave a Reply

Your email address will not be published. Required fields are marked *