ಬಂಟ್ವಾಳ: ಶ್ರೀ ಮಹಾದೇವದೇವೇಶ್ವರ ದೇವಸ್ಥಾನದ ಶೌಚಾಲಯ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯಿಂದ ರೂಪಾಯಿ 1 ಲಕ್ಷ ಅನುದಾನವನ್ನು ಇಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗುಣಶೇಖರ ಕೊಡಂಗೆ ಇವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯನಂದ, ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸುಧಾ ರೈ, ಗ್ರಾಮ ಪಂಚಾಯತ್ ಅಧ್ಯಕ್ಷ ದೇವದಾಸ್ ಅಬುರ, ಕ್ಷೇತ್ರ ಆಡಳಿತ ಮೊಕ್ತೇಸರರಾದ ಯಶೋಧರ ಕಜೆಕಾರು , ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಗೌಡ ಹಾಗೂ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.



