Breaking
19 Sep 2026, Sat

ರಸ್ತೆಯ ಅಂಚಿಗೆ ತಲೆ ಹಾಕಿ ಮಲಗಿದ್ದ ವ್ಯಕ್ತಿಯ ಮೇಲೆ ಹರಿದ ಲಾರಿ: ವ್ಯಕ್ತಿ ಸ್ಥಳದಲ್ಲೇ ಸಾವು

ಕೊಡಗು: ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯ ತಲೆಯ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗುಡ್ಡೆಹೊಸೂರು ಜುಲೈ. 10 ರಂದು ಬೆಳಗ್ಗೆ ನಡೆದಿದೆ.

ಮೃತರನ್ನು ನಾಪೊಕ್ಲು ಕೊಟ್ಟಮುಡಿ ಗ್ರಾಮದ ನಿವಾಸಿಯಾಗಿರುವ ಅಬ್ದುಲ್ ಸಲಾಂ ಎಂದು ಗುರುತಿಸಲಾಗಿದೆ.

ಅಬ್ದುಲ್ ಅವರು ಹೆದ್ದಾರಿ ಅಂಚಿನಲ್ಲಿ ತಲೆಹಾಕಿ ಮಲಗಿದ್ದಾಗ ಬೆಳಗಿನ ಜಾವ ಮೈಸೂರಿನತ್ತ ತೆರಳುತ್ತಿದ್ದ ಲಾರಿ ತಲೆಯ ಮೇಲೆ ಹರಿದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಕುಶಾಲನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *