Breaking
13 Aug 2025, Wed

ತುಳುನಾಡ ಪೊರ್ಲು ಚಾರಿ ಟೇಬಲ್ ಟ್ರಸ್ಟ್ (ರಿ.) ಮಿಜಾರು: 58ನೇ ಸೇವಾ ಯೋಜನೆ ಹಸ್ತಾಂತರ

ಬಂಟ್ವಾಳ : ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡುತ್ತಾ ಬಂದಿರುವ ತುಳುನಾಡ ಪೊರ್ಲು ಚಾರಿ ಟೇಬಲ್ ಟ್ರಸ್ಟ್ (ರಿ.) ಮಿಜಾರು ತನ್ನ 58ನೇ ಸೇವಾ ಯೋಜನೆಯನ್ನು ಮಣಿಯರಪಾದೆ ನಿವಾಸಿಯಾಗಿರುವ ಅಭಿಷೇಕ್ ಅವರಿಗೆ ಹಸ್ತಾಂತರಿಸಿದೆ.

ಅಭಿಷೇಕ್ ಇವರಿಗೆ ಕಳೆದ 2 ವಾರಗಳಿಂದ ಗಂಭೀರ ಹೊಟ್ಟೆನೋವು ಕಾಣಿಸಿಕೊಂಡಿದ್ದು ಕಾರಣ ಡಾಕ್ಟರ್ ಆಪರೇಷನ್ ಮಾಡಬೇಕೆಂದು ತಿಳಿಸಿದ್ದಾರೆ. ಆಪರೇಷನ್ ಗೆ ಸುಮಾರು 1ಲಕ್ಷ ರೂ. ಖರ್ಚಾಗಲಿದ್ದು ಇದರ ಜೊತೆಗೆ ತಿಂಗಳಿಗೊಮ್ಮೆ ಸುಮಾರು 4000ರಿಂದ 5000 ರೂಪಾಯಿವರೆಗೆ ಆಸ್ಪತ್ರೆ ಖರ್ಚು ಆಗುತ್ತಿದೆ. ಈ ಹಿನ್ನಲೆ ಈ ಬಡ ಕುಟುಂಬಕ್ಕೆ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.) ಮಿಜಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಂಟ್ವಾಳ ಇಲ್ಲಿ 15000/-ರೂಪಾಯಿಯ ಧನಸಹಾಯದ ಚೆಕ್ ನ್ನು ಚಂದ್ರಹಾಸ್ ಕೊಟ್ಟಾರಿ ಬಂಟ್ವಾಳ ಇವರ ಮೂಲಕ ಹಸ್ತಾಂತರಿಸಿದೆ.

ಈ ಸಂದರ್ಭದಲ್ಲಿ ತಂಡದ ಅಧ್ಯಕ್ಷರಾದ ಸಂದೀಪ್ ಮಿಜಾರ್ ಉಪಾಧ್ಯಕ್ಷರಾದ ಚಂದ್ರಶೇಖರ ಕೋಟ್ಯಾನ್ ಸರಪಾಡಿ ಸೇವಾ ಮಾಣಿಕ್ಯರಾದ ಉಮೇಶ್ ಕೋಟ್ಯಾನ್ ಬಂಟ್ವಾಳ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *