ಬಂಟ್ವಾಳ : ನಿರ್ದಿಷ್ಟ ಗುರಿಯೊಂದಿಗೆ ಸಾಧನಾ ಪಥದಲ್ಲಿ ಯುವವಾಹಿನಿ ಸಂಘಟಿತವಾಗಿ ಪಯಣಿಸುತ್ತಿದೆ ಎಂದು ಯುವವಾಹಿನಿ ಬಂಟ್ವಾಳ ಘಟಕದ ರಜತವರ್ಷದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು.
ಅವರು ರವಿವಾರ ಬಿ ಸಿ ರೋಡ್ ಯುವವಾಹಿನಿ ಭವನದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ
ನೂತನ ಕಾರ್ಯಕಾರಿ ಸಮಿತಿಯ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ನಿರ್ಗಮನ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ನೂತನ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಇವರಿಗೆ ಯುವವಾಹಿನಿಯ ಮಾರ್ಗದರ್ಶಿ ಪುಸ್ತಕ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು ಕಾರ್ಯದರ್ಶಿ ಮಧುಸೂದನ್ ಮದ್ವ, ಕೋಶಾಧಿಕಾರಿ ನವೀನ್ ಪೂಜಾರಿ, ಅಧಿಕಾರ ಸ್ವೀಕರಿಸಿದರು.
ಒಂದು ವರ್ಷದ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು

ಪ್ರಥಮ ಉಪಾಧ್ಯಕ್ಷ ಕಿರಣ್‌ರಾಜ್ ಪೂಂಜರೆಕೋಡಿ ಹಾಗೂ ನಿಕೇಶ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು

