Breaking
25 Mar 2026, Wed

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಸುಳ್ಳು ಅಪಪ್ರಚಾರದ ಬಗ್ಗೆ ಖಂಡನಾ ನಿರ್ಣಯ

ಬಂಟ್ವಾಳ: ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಇಂದು(ಆ.18) ನಡೆದ ತುರ್ತು ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಸುಳ್ಳು ಅಪಪ್ರಚಾರದ ಬಗ್ಗೆ ಖಂಡನಾ ನಿರ್ಣಯವನ್ನು ಕೈಗೊಳ್ಳಲಾಯಿತು.

ಈ ಸಭೆಯಲ್ಲಿ ವೀಕ್ಷಕರಾಗಿ ವೀರ್ ರಾಜೇಶ ಜೈನ್ ಮಂಗಳೂರು, ಮಿಲನ್ ಘಟಕದ ಉಪಾಧ್ಯಕ್ಷರು ವೀರ್ ಸುದರ್ಶನ್ ಜೈನ್, ಕಾರ್ಯದರ್ಶಿ ವೀರ್ ಸುಭಾಷ್ ಜೈನ್ , ಜೈನ್ ಮಿಲನ್ ಅಧ್ಯಕ್ಷ ರಾದ ವೀರ್ ರಾಜೇಂದ್ರ ಜೈನ್ ಹಾಗೂ ಪಚ್ಚಾಜೆ ಜಿನರಾಜ ಅರಿಗರು ಭಾಗವಹಿಸಿ ಘಟನೆಯನ್ನು ಖಂಡಿಸಿದರು.

ಪೂಜ್ಯ ಹೆಗ್ಗಡೆಯವರ ಚಿಂತನೆ, ಖ್ಯಾತಿ ಅವರಿಗೆ ಸಿಗುವ ಮನ್ನಣೆ ಸಹಿಸದ ಕೆಲವೊಂದು ಪಟ್ಟ ಬದ್ದ ಹಿತಾ ಶಕ್ತಿಗಳು ಜೈನ ಸಮಾಜ ಮತ್ತು ಜೈನ ಮುನಿಗಳ ಮೇಲೆ ಇಲ್ಲ ಸಲ್ಲದ ಆರೋಪ ಹಾಗೂ ಕೆಲವೊಂದು ಜನ ಸಮೂಹವನ್ನು ಕ್ಷೇತ್ರದ ವಿರುದ್ದ ಎತ್ತಿ ಕಟ್ಟುವ ಮೂಲಕ ಜನ ಸಾಮಾನ್ಯರಲ್ಲಿ ಭಯ ಆತಂಕ ಉಂಟುಮಾಡುತ್ತಿದೆ ಎಂದು ಈ ಸಭೆಯಲ್ಲಿ ತಿಳಿಸಲಾಯಿತು.

ಕಾರ್ಯಕ್ರಮವನ್ನು ವೀರ್ ಜಯಕೀರ್ತಿ ಕಾರ್ಯಕ್ರಮ ನಿರೂಪಿಸಿ, ವೀರ್ ಸುಭಾಶ್ಚಂದ್ರ ಜೈನ್ ಧನ್ಯವಾದವಿತ್ತರು. ಸಮಾಜದ ಎಲ್ಲಾ ಜೈನ್ ಭಾಂದವರು ಒಕ್ಕರಲಿನಿಂದ ಸುಳ್ಳು ಅಪಪ್ರಚಾರ ವಿರುದ್ಧ ಖಂಡನಾ ನಿರ್ಣಯ ಕೈಗೊಂಡರು.

Leave a Reply

Your email address will not be published. Required fields are marked *