ಕಾರ್ಕಳ: ತಾಲೂಕಿನ ಮರ್ಣೆ ಗ್ರಾಮದ ಮಿತ್ತಬೆಟ್ಟು ಉರ್ಕಾಲ್ ಎಂಬಲ್ಲಿ ಹೈಟೆನ್ಯನ್ ವಿದ್ಯುತ್ ಪ್ರವಹಿಸಿ ಯುವಕ ದಾರುಣವಾಗಿ ಮೃತಪಟ್ಟ ಘಟನೆ ಜೂ.29 ರಂದು ಬೆಳಗ್ಗೆ ನಡೆದಿದೆ.

ಮೃತಪಟ್ಟ ವ್ಯಕ್ತಿ ಮರ್ಣೆ ಗ್ರಾಮದ ಬಸದಿ ಬಳಿಯ ನಿವಾಸಿ ಸುಧಾಕರ (35)ಎಂದು ಗುರುತಿಸಲಾಗಿದೆ.

ಲೈನ್ ಫಾಲ್ಟ್ ಪತ್ತೆಹಚ್ಚಲು ಮಿತ್ತಬೆಟ್ಟು ಪ್ರದೇಶಕ್ಕೆ ಸ್ಥಳೀಯ ಎಲೆಕ್ಟ್ರಿಷಿಯನ್ ಒಬ್ಬರೂ ಸುಧಾಕರ್ ಅವರನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಜಿಒಎಸ್ ಸ್ವಿಚ್ ಆಫ್ ಮಾಡಲು ಮುಂದಾದಾಗ, ಜಂಪ್ ವಯರ್ ತುಂಡಾಗಿ ಅದರಲ್ಲೇ ವಿದ್ಯುತ್ ಹರಿಯುತ್ತಿದ್ದುದು ಅವರಿಗೆ ಗೋಚರವಾಗಲಿಲ್ಲ. ಸ್ಪರ್ಶಿಸುವುದರೊಂದಿಗೆ ತೀವ್ರ ವಿದ್ಯುತ್ ಪ್ರವಹಿಸಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



