ಅರಂತೋಡು: ಕಾರು ಮತ್ತು ಆಟೋ ಟ್ಯಾಕ್ಸಿ ಢಿಕ್ಕಿಯಾಗಿ ಟ್ಯಾಕ್ಸಿಯಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡ ಘಟನೆ ಆಲೆಟ್ಟಿ ರಸ್ತೆಯ ನಾರ್ಕೋಡು ಸದಾಶಿವ ದೇವಸ್ಥಾನದ ದ್ವಾರದ ಬಳಿ ಶನಿವಾರ ಜೂನ್ 28 ಮಧ್ಯಾಹ್ನ ನಡೆದಿದೆ.

ಕೇರಳದ ಪಾಣತ್ತೂರು ಕಡೆಯಿಂದ ಬಂದ ಆಟೋಟ್ಯಾಕ್ಸಿ ದ್ವಾರದ ಬಳಿ ನಿಂತು ಮತ್ತೆ ಮುಖ್ಯರಸ್ತೆಗೆ ಚಲಿಸಿದ್ದಾಗ, ಸುಳ್ಯದಿಂದ ಬಂದಡ್ಕ ಕಡೆಗೆ ಹೋಗುತ್ತಿದ್ದ ಕಾರು ಆಟೋಟ್ಯಾಕ್ಸಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಈ ಘಟನೆಯಲ್ಲಿ ಆಟೋಟ್ಯಾಕ್ಸಿಯಲ್ಲಿದ್ದ ಮಕ್ಕಳು ಸೇರಿದಂತೆ ಮೂರು ಮಂದಿ ಗಾಯಗೊಂಡಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಎರಡೂ ವಾಹನಗಳಿಗೆ ಹಾನಿಯಾಗಿದೆ. ಸುಳ್ಯ ಪೋಲಿಸರು ಸ್ಥಳಕ್ಕಾಗಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.


