ಬಂಟ್ವಾಳ: ಸಜೀಪ ಮೂಡ ಜಾಡ ಕೋಡಿ ಶ್ರೀ ನಾಗರಾಜ ನಾಗಕನ್ನಿಕ ರಕ್ತೇಶ್ವರಿ ಗುಳಿಗ ಕ್ಷೇತ್ರದಲ್ಲಿ ನಾಗರ ಪಂಚಮಿ ಪ್ರಯುಕ್ತ ಶ್ರೀ ದೇವರಿಗೆ ಫಲಪಂಚಾಮೃತ ಅಭಿಷೇಕ ನಾಗತಂಬಿಲ ಸೇವೆ ನಡೆಯಿತು.

ಈ ಧಾರ್ಮಿಕ ವಿಧಿವಿಧಾನವನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.
ನಾಗರಪಂಚಮಿ ದಿನದಂದು ಊರವರು ಹಾಗೂ ಕುಟುಂಬದವರು ಶ್ರೀ ನಾಗದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಿದರು.



