Breaking
19 Sep 2026, Sat

ಔಷದಿಯೆಂದು ಇಲಿ ಪಾಷಾಣವನ್ನು ಸೇವಿಸಿ: ಹೆಡ್ ಕಾನ್‌ಸ್ಟೆಬಲ್ ಸಾವು

ಮಂಗಳೂರು: ಔಷದಿಯೆಂದು ಭಾವಿಸಿ ಇಲಿ ಪಾಷಾಣವನ್ನು ಸೇವನೆ ಮಾಡಿ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತಪಟ್ಟವರನ್ನು ಸುರತ್ಕಲ್ ಬಳಿಯ ಚೆಲ್ಯಾರು ನಿವಾಸಿ ಮತ್ತು ಹರೇಕಳ ಮೂಲದ ಮಂಜುನಾಥ ಹೆಗ್ಡೆ ಎಂದು ಗುರುತಿಸಲಾಗಿದೆ.

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಂಜುನಾಥ ಅವರು ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಮಯದಲ್ಲಿ ಔಷದಿ ಎಂದು ಇಲಿ ವಿಷ ಪಾಷಾಣವನ್ನು ಸೇವಿಸಿದ್ದಾರೆ. ಇವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *