Breaking
22 Mar 2026, Sun

ನಾಗರ ಪಂಚಮಿ ಅಂಗವಾಗಿ ರೋಗಿಗಳಿಗೆ ಉಚಿತ ಹಾಲು , ಹಣ್ಣು ಹಂಪಲು ವಿತರಣೆ

ಬೆಳ್ತಂಗಡಿ : ನಾಗರ ಪಂಚಮಿ ಅಂಗವಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ರೋಗಿಗಳಿಗೆ ಉಚಿತವಾಗಿ ಹಾಲು , ಹಣ್ಣು ಹಂಪಲುಗಳನ್ನು ಜುಲೈ 29 ರಂದು ವಿತರಿಸಲಾಯಿತು.

ಸಾಂಪ್ರಾದಾಯಕವಾಗಿ ನಾಗರ ಪಂಚಮಿ ಹೆಸರಿನಲ್ಲಿ ಮೌಢ್ಯಕ್ಕೆ ಒಳಗಾಗಿ ಜನರು ಹಾಲನ್ನು ನಾಗರ ಹುತ್ತಗಳಿಗೆ , ಕಲ್ಲಿಗೆ ಸುರಿದು ಅಪಾರ ಪೌಷ್ಟಿಕಾಂಶಯುಳ್ಳ ಹಾಲನ್ನು ಪೋಲು ಮಾಡುವ ಬದಲಾಗಿ ರೋಗಿಗಳಿಗೆ ನೀಡುವ ವಿನೂತನ ಕಾರ್ಯಕ್ರಮಕ್ಕೆ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆ ಸಾಕ್ಷಿಯಾಯಿತು.

ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರಿದಾಸ್ ಎಸ್. ಎಂ ರವರು ದೇಶದಲ್ಲಿ 28 ಕೋಟಿ ಜನರು ಒಂದು ತೊಟ್ಟು ಹಾಲು ಖರೀದಿಸಲು ಸಾಧ್ಯವಿಲ್ಲದೆ ಜೀವಿಸುತ್ತಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಅಪೌಷ್ಟಿಕತೆಯ ಕೊರತೆಯಿಂದ ಮಕ್ಕಳು , ಮಹಿಳೆಯರ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಾವು ನಾಗರ ಪಂಚಮಿ ಹೆಸರಿನಲ್ಲಿ ಕಲ್ಲಿಗೆ , ಹುತ್ತಗಳಿಗೆ ಹಾಲು ಚೆಲ್ಲುವ ಮೂಲಕ ದುರುಪಯೋಗ ಮಾಡುತ್ತೇವೆ. ಅದರ ಬದಲಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ , ರೋಗಿಗಳಿಗೆ ನೀಡಿದರೆ ಉತ್ತಮ. ರೆಡ್ ಕ್ರಾಸ್ ಸೊಸೈಟಿ ಇಡೀ ಜಗತ್ತಿನಾದ್ಯಂತ ಅಪೌಷ್ಟಿಕತೆಯ ವಿರುದ್ಧ ಸಮರ ಸಾರಿದ್ದು , ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ರೋಗಿಗಳಿಗೆ ಹಾಲು , ಹಣ್ಣುಹಂಪಲು ವಿತರಣೆ ಮಾಡಲಾಯಿತು ಎಂದರು. ಯಾವುದೇ ರೀತಿಯ ಹಾವುಗಳು ಹಾಲು ಕುಡಿಯುವುದಿಲ್ಲ , ಹಾಲು ಕುಡಿಯುವ ಹಾವು ಸಾಯುತ್ತದೆ ಇದು ವೈಜ್ಞಾನಿಕ ಸತ್ಯ. ಆದರೂ ಹಾವಿನ ಹೆಸರಿನಲ್ಲಿ ಹಾಲನ್ನು ಪೋಲು ಮಾಡುವುದನ್ನು ನಿಲ್ಲಿಸಿ , ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ನೀಡಿದರೆ ಒಂದು ಜೀವ ಉಳಿಸಿದಂತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್ ಕೆ , ಹಿರಿಯ ಸುಶ್ರುಕ್ರಿ ಪೊನ್ನಮ್ಮ ರೆಡ್ ಕ್ರಾಸ್ ಸೊಸೈಟಿ ಕಾರ್ಯದರ್ಶಿ ಯಶವಂತ ಪಟವರ್ಧನ್ , ಜೋನ್ ಅರ್ವಿನ್ ಡಿಸೋಜ , ನಿರ್ದೇಶಕಿ ನ್ಯಾಯವಾದಿ ಸುಕನ್ಯಾ ಹೆಚ್ , ಸದಸ್ಯ ಶೇಖರ್ ಲಾಯಿಲ , ಎಕೆಜಿ ಸೊಸೈಟಿ ಸಿಬ್ಬಂದಿಗಳಾದ ಸಂಜೀವ ಆರ್ , ಕು. ಕೀರ್ತನಾ ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *