ಬೆಳ್ತಂಗಡಿ: ತಾಲೂಕಿನ ಬೆಳಾಲುನಲ್ಲಿರುವ ಶ್ರೀ ಧ.ಮಂ.ಅನುದಾನಿತ ಪ್ರೌಢ ಶಾಲೆಯಲ್ಲಿ 2025-26ರ ಶೈಕ್ಷಣಿಕ ವರ್ಷದ ಶಾಲಾ ಸಂಘಗಳ ಉದ್ಘಾಟನೆ ಜೂ.28 ರಂದು ನಡೆಯಿತು.
ಪೆರಿಂಜೆ ಶ್ರಿ ಧ.ಮಂ.ಅನುದಾನಿತ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಮುಕುಂದಚಂದ್ರ ಎಲ್.ಎನ್ ಅವರು ಉದ್ಘಾಟನೆ ನೆರವೇರಿಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಒಳ್ಳೆಯ ಅನುಭವ ಪಡೆದುಕೊಳ್ಳಬಹುದು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಮಾತನಾಡಿ ಅವಕಾಶ ಬಳಸಿಕೊಂಡು ವಿಶೇಷ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದರು.

ಸಾಹಿತ್ಯ ಮತ್ತು ಕಲಾ ಸಂಘದಿಂದ ಆಯಿಷತ್ ಸಂಶಿಯ, ಹಿಂದಿ ಸಂಘದಿಂದ ತ್ರಿಷಾ ಜೈನ್, ಗಣಿತ ಸಂಘದಿಂದ ರಕ್ಷಾ ಎನ್, ವಿಜ್ಞಾನ ಸಂಘದಿಂದ ಅಂಕಿತಾ,ತುಳು ಸಂಘದಿಂದ ರಕ್ಷಾ ಕೆ, ಕ್ರೀಡಾ ಸಂಘದಿಂದ ಸಮ್ಯಕ್, ಇಂಟರ್ ರ್ಯಾಕ್ಟ ಕ್ಲಬ್ ನಿಂದ ನೇತ್ರಾವತಿ ವಾರ್ಷಿಕ ಚಟುವಟಿಕೆಗಳನ್ನು ಮಂಡಿಸಿದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಸುಮನ್ ಯು.ಎಸ್ ಸಂಘಟಿಸಿದರು.

ವಿದ್ಯಾರ್ಥಿಗಳಾದ ಅಶ್ವಿನಿ ಸ್ವಾಗತಿಸಿ ,ಮುರ್ಷಿದ ವಂದಿಸಿದರು, ಸೃಷ್ಟಿ ಕಾರ್ಯಕ್ರಮ ನಿರೂಪಿಸಿದರು.

