Breaking
20 Sep 2026, Sun

ಅನಾರೋಗ್ಯದಿಂದ ಬಳಲುತಿದ್ದ ಸುರೇಶ್ ರವರಿಗೆ ಗ್ರಾಮಸ್ಥರಿಂದ ನೆರವು

ಬೆಳ್ತಂಗಡಿ : ಮೊಗ್ರು ಗ್ರಾಮ ಗಾಂತ್ಯೊಟ್ಟ ನಿವಾಸಿ ಸುರೇಶ್ ಅವರು ಅನಾರೋಗ್ಯದಿಂದ ಬಳಲುತಿದ್ದು ಆ. 08 ರಂದು ತನ್ನ ನಿವಾಸದಿಂದ 108 ಆಂಬುಲೆನ್ಸ್ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು.

ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಗಂಗಾಧರ ಪೂಜಾರಿ, ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಸ್ಥಳೀಯರಾದ ಗಣೇಶ್ ಬಾoಕ್ಯ, ಬೆಳಿಯಪ್ಪ ಗುಡ್ಡೆಜೆರ, ಪದ್ಮುಂಜ ಪ್ರಾಥಮಿಕ ಅರೋಗ್ಯ ಕೇಂದ್ರ ವೈದ್ಯರಾದ ಸುನಿಲ್ ಕುಮಾರ್, ಬಂದಾರು ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿ ಜಗದೀಶ್ ಎಂ.ವಿ, ಆಂಬುಲೆನ್ಸ್ ಸಿಬ್ಬಂದಿಯವರು ಸೇರಿ ಹೆಚ್ಚಿನ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರದಿದ್ದಾರೆ.

Leave a Reply

Your email address will not be published. Required fields are marked *