Breaking
24 Mar 2026, Tue

ಯುವ ನಾಟಕಕಾರ ನಾರಾಯಣ ಕೊಯಿಲ ಡೆಂಗ್ಯೂ ಜ್ವರದಿಂದ ನಿಧನ

ಪುಂಜಾಲಕಟ್ಟೆ: ಯುವ ನಾಟಕಕಾರ ನಾರಾಯಣ ಕೊಯಿಲ (35) ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಜು.08 ರಂದು ಮೃತಪಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ನಾರಾಯಣ ಕೊಯಿಲ ಇವರು ಸುಮಾರು 12ಕ್ಕೂ ಹೆಚ್ಚು ತುಳು ನಾಟಕಗಳನ್ನು ರಚಿಸಿದ್ದು, ವಿವಿಧ ದೈವ, ದೇವಸ್ಥಾನಗಳ ತುಳು, ಕನ್ನಡ ಭಕ್ತಿಗೀತೆ, ಜಾನಪದ ಗೀತೆ ಬರೆದು ಧ್ವನಿಮುದ್ರಣಗೊಂಡಿದೆ. ಪಂಡ ಕೇನುಜೆರ್‌ ನಾಟಕಕ್ಕೆ ಪ್ರಶಸ್ತಿ ಕೂಡ ಲಭಿಸಿದ್ದು, ಈ ಚಿತ್ರ ನೂರಕ್ಕೂ ಹೆಚ್ಚು ಪ್ರದರ್ಶನ ಕೂಡ ಕಂಡಿದೆ. ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಅವರು ತೊಡಗಿಸಿಕೊಂಡಿದ್ದರು.

ಮೇಸ್ತ್ರಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಇವರು ಮನೆಗೆ ಆಧಾರಸ್ತಂಭವಾಗಿದ್ದರು. ಮೃತರು ಅವಿವಾಹಿತರಾಗಿದ್ದು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *