Breaking
16 Aug 2025, Sat

ಅಗ್ನಿಪಥ್ ಯೋಜನೆಯ ಲಿಖಿತ ಪರೀಕ್ಷೆಯನ್ನು ಎದುರಿಸಲಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್

ಪುತ್ತೂರು: ಪ್ರತಿಷ್ಠಿತ ಅಗ್ನಿಪಥ್ ಯೋಜನೆಯಲ್ಲಿ ಅಗ್ನಿವೀರರಾಗಲು ನೇಮಕಾತಿಗೆ ಅರ್ಜಿ ಸಲ್ಲಿಸಿ ಪ್ರಥಮ ಹಂತದ ಲಿಖಿತ ಪರೀಕ್ಷೆಯನ್ನು ಎದುರಿಸಲಿರುವ ವಿದ್ಯಾರ್ಥಿಗಳಿಗೆ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ ರವರು ಶ್ರೀ ಕ್ಷೇತ್ರದಲ್ಲಿ ಶುಭವನ್ನು ಹಾರೈಸಿದರು.

ಪ್ರತಿಷ್ಠಿತ ಸೇನಾ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯು ಪ್ರತಿವರ್ಷದಂತೆ ಈ ವರ್ಷವು ಸೇನಾ ನೇಮಕಾತಿಗಳ ತರಬೇತಿಯನ್ನು ನೀಡುತ್ತಿದ್ದು ಪ್ರಸ್ತುತ ವರ್ಷದ ಅಗ್ನಿಪಥ್ ಯೋಜನೆಯಲ್ಲಿ ಅಗ್ನಿವೀರರಾಗಲು ಪ್ರಥಮ ಹಂತದ ಲಿಖಿತ ಪರೀಕ್ಷೆಯನ್ನು ಎದುರಿಸಲಿರುವ ವಿದ್ಯಾರ್ಥಿಗಳಿಗೆ ಪಂಜಿಗುಡ್ಡೆ ಈಶ್ವರ ಭಟ್ ರವರು ಶುಭವನ್ನು ಹಾರೈಸಿದರು.

ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಭವಿಷ್ಯದ ಸೇನಾ ಯೋಧರಾಗುವ ನಿಟ್ಟಿನಲ್ಲಿ ಪ್ರಾರ್ಥಿಸಿ ಪ್ರಸಾದ ನೀಡಲಾಯಿತು.

ಈ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಹಾಗೂ ಅವರ ಧರ್ಮ ಪತ್ನಿ, ತರಬೇತುದಾರೆ ರಮ್ಯಾ ಭಾಗ್ಯೇಶ್ ರೈ ರವರು ಉಪಸ್ಥಿತರಿದ್ದು, ಪಂಜಿಗುಡ್ಡೆ ಈಶ್ವರ ಭಟ್ ರವರು ವಿದ್ಯಾಮಾತಾ ಅಕಾಡೆಮಿಯ ಎಲ್ಲಾ ಸಮಾಜಮುಖಿ ಚಿಂತನೆಗಳ ಅತ್ಯುತ್ತಮ ಕೆಲಸಗಳಿಗೆ ಹಾಗೂ ಮುಖ್ಯವಾಗಿ ದೇಶ ಕಾಯುವ ಸೇನಾ ಯೋಧರನ್ನು ತಯಾರು ಮಾಡುವ ಒಳ್ಳೆಯ ಕೆಲಸಕ್ಕೆ ಸದಾ ಕ್ಷೇತ್ರದ ಹಾಗೂ ನಮ್ಮ ವೈಯಕ್ತಿಕ ನೆಲೆಯಲ್ಲಿ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *