Breaking
19 Sep 2026, Sat

ಮಲ್ಪೆಯಲ್ಲಿ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

ಉಡುಪಿ : ಮೀನುಗಾರಿಕೆ ತೆರಳಿದ್ದ ಬೋಟ್ ಗಾಳಿಗೆ ಸಿಲುಕಿದ ಪರಿಣಾಮ ಮೀನುಗಾರರೊಬ್ಬರು ಮೃತಪಟ್ಟಿರುವ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.

ಅಂಕೋಲಾದ ನಿವಾಸಿಯಾಗಿರುವ ಶ್ರೀನಿವಾಸ ರಾಮ ತಾಂಡೇಲ (46) ಮೃತ ದುರ್ದೈವಿಯಾಗಿದ್ದಾರೆ.

ಆ.13ರಂದು ಬೆಳಗ್ಗೆ ಸುಮಾರು 10.30ಕ್ಕೆ ಮಾಣಿ ಕೃಷ್ಣ ಹೆಸರಿನ ಬೋಟಿನಲ್ಲಿ ಮಲ್ಪೆ ಒಟ್ಟು 37 ಜನರು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೋಗಿದ್ದರು.

ಸುಮಾರು 15 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆಗಾಗಿ ಬಲೆ ಬಿಡುತ್ತಿರುವಾಗ ಬೋಟು ಬಿರುಗಾಳಿಗೆ ಸಿಲುಕಿ ಬೋಟು ರೋಲ್ ಆಗಿ ಶ್ರೀನಿವಾಸ ರಾಮ ತಾಂಡೇಲ ಅವರು ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದಲ್ಲಿ ಮೀನುಗಾರಿಕೆಗೆ ಬಿಟ್ಟ ಬಲೆಯೆ ಒಳಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಅನಂತರ ಅವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *