ಬೆಳ್ತಂಗಡಿ : ಮನೆಯೊಂದು ಬಿರುಕು ಬಿಟ್ಟು ,ಮನೆಯ ಗೋಡೆ ಕುಸಿದ ಘಟನೆ ಬೆಳ್ತಂಗಡಿಯ ಲಾಯಿಲದಲ್ಲಿ ನಡೆದಿದೆ.
ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್ ಅವರ ಮನೆ, ತಡ ರಾತ್ರಿ 1.30ಗೆ ಕುಸಿದಿದೆ.

ಈ ಸಂದರ್ಭದಲ್ಲಿ ಮನೆಯಲ್ಲಿ ಸುಗಂಧಿ ಮತ್ತು ಅವರ ಪತಿ ಜಗನ್ನಾಥ್, ಮಗ ಅನಿಲ್, ಸೊಸೆ ಮಧುರ ಪುಟ್ಟ ಮಕ್ಕಳು ಮಲಗಿದ್ದರು.

ಕುಸಿತಕ್ಕೂ ಮೊದಲು ಗೋಡೆ ಬಿರುಕು ಬಿಟ್ಟ ಶಬ್ದ ಕೇಳಿ ಮನೆಯವರು ಎಚ್ಚರಗೊಂಡು ಹೊರಗಡೆ ಓಡಿ ಬಂದಿದ್ದರಿಂದ ಜೀವ ಹಾನಿ ತಪ್ಪಿದೆ.
ಘಟನೆಯಲ್ಲಿ ಮನೆಯ ದಿನ ಬಳಕೆಯ ಸಾಮಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿವೆ.

ಈ ವೇಳೆ ವಿಷಯ ತಿಳಿದು ಶಾಸಕ ಹರೀಶ್ ಪೂಂಜಾ, ಹಾಗೂ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿ ಕುಸಿತಗೊಂಡಿದ್ದ ಮನೆಯನ್ನು ವೀಕ್ಷಿಸಿದ್ದಾರೆ.


