Breaking
20 Sep 2026, Sun

ಧರ್ಮಸ್ಥಳ: ಬೊಳಿಯಾರಿನಲ್ಲಿ ರಸ್ತೆ ಬದಿ ಕಾಡಾನೆ ಪ್ರತ್ಯಕ್ಷ

ಧರ್ಮಸ್ಥಳ: ಬೊಳಿಯಾರಿನಲ್ಲಿ ಎರಡು ಮೂರು ವಾರದಿಂದ ಬೀಡುಬಿಟ್ಟಿರುವ ಕಾಡಾನೆಯು ಆ.9ರಂದು ಬೆಳಿಗ್ಗೆ ಮತ್ತೆ ರಸ್ತೆಯ ಬದಿ ಪ್ರತ್ಯಕ್ಷವಾಗಿದೆ.

ರಾತ್ರಿ ಹೊತ್ತು ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಕಳೆದ ಕೆಲ ದಿನಗಳಿಂದ‌ ಬೊಳಿಯಾರು ಪರಿಸರದಲ್ಲಿ ಹಗಲು ಹೊತ್ತಿನಲ್ಲಿಯೇ ಓಡಾಟ ನಡೆಸುತ್ತಿದೆ.

ವಾರದ ಹಿಂದೆ ಶಾಲೆಗೆ ಹೋಗಲು ಬಸ್ ಕಾಯುತ್ತಿದ್ದ ಮಕ್ಕಳತ್ತ ಕಾಡಾನೆ ನುಗ್ಗಿ ಬಂದಿದ್ದು, ಅದೃಷ್ಟವಶಾತ್‌ ಮಕ್ಕಳು ಅಪಾಯದಿಂದ ಪಾರಾಗಿದ್ದರು. ಕಾಡಾನೆಯ ಉಪಟಳ ಹೆಚ್ಚಾಗಿರುವ ಹಿನ್ನಲೆ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕಾಡಾನೆಗಳನ್ನು ದಟ್ಟ ಅರಣ್ಯಕ್ಕೆ ಓಡಿಸಲು ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *