Breaking
20 Sep 2026, Sun

ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟ ಯುವತಿ ನಾಪತ್ತೆ

ಮಂಗಳೂರು: ಮನೆಯಿಂದ ಸ್ನೇಹಿತೆಯರೊಂದಿಗೆ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟು ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ಆ.07 ರಂದು ನಡೆದಿದೆ

ಬೆಳಿಗ್ಗೆ ಮನೆಯಿಂದ ತಿಳಿಸಿ ಹೊರಟ್ಟಿದ್ದು, ತಡರಾತ್ರಿ ವರೆಗೂ ವಾಪಾಸು ಬಾರದ ಕಾರಣ, ಮೊಬೈಲ್‌ಗೆ ಕರೆ ಮಾಡಿದ್ದರು ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ಸ್ನೇಹಿತೆಯರನ್ನು ವಿಚಾರಿಸಿದಾಗ ಆಕೆ ಅಲ್ಲಿಯೂ ಹೋಗಿಲ್ಲ ಎಂದು ತಿಳಿದು ಬಂದಿದೆ. ಎಲ್ಲ ಕಡೆ ಹುಡುಕಾಟ ನಡೆಸಿದರು ಮಾಹಿತಿ ಪತ್ತೆಯಾಗಿಲ್ಲ.

ನಾಪತ್ತೆಯಾದ ಯುವತಿ ನಗರದ ಹೊಯ್ಗೆ ಬಜಾರ್‌ ನಿವಾಸಿ ಶಾಹಿನಾ ಬಾನು (23) ಎಂದು ಗುರುತಿಸಲಾಗಿದೆ. ಪ್ಯಾರಾ ಮೆಡಿಕಲ್‌ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದರು. ಸುಮಾರು 4.8 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್‌, ಬಿಳಿ ಬಣ್ಣದ ಟಾಪ್‌ ಹಾಗೂ ಕಪ್ಪು ಬಣ್ಣದ ಬುರ್ಖಾ ಧರಿಸಿದ್ದರು. ಕನ್ನಡ, ಬ್ಯಾರಿ, ತುಳು, ಹಿಂದಿ, ಇಂಗ್ಲಿಷ್‌ ಭಾಷೆ ಬಲ್ಲವರಾಗಿದ್ದಾರೆ.

ಯುವತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಪಾಂಡೇಶ್ವರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *