Breaking
30 Jun 2026, Tue

ಸಹಪಾಠಿಗಳ ರ‍್ಯಾಗಿಂಗ್ ಗೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಬಾಗಲಕೋಟೆ: ರ‍್ಯಾಗಿಂಗ್ ಗೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ.

ಅಂಜಲಿ ಮುಂಡಾಸ(21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾಳೆ.

ಈಕೆ ಬಾಗಲಕೋಟೆ ಸಮೀಪದ ಭಂಡಾರಿ ಕಾಲೇಜಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದು ಶುಕ್ರವಾರ ಕಾಲೇಜ್ ನಲ್ಲಿ ನಡೆದ ರ‍್ಯಾಗಿಂಗ್ ನಲ್ಲಿ ಮಾನಸಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಸಾವಿಗೆ ಶರಣಾಗಿದ್ದಾರೆ.

ಇನ್ನು ಸಾವಿಗೂ ಮುನ್ನ ಅಂಜಲಿ ಡೆತ್ ನೋಟ್ ವೊಂದನ್ನು ಬರೆದಿಟ್ಟಿದ್ದು, ಅದರಲ್ಲಿ ಮೂವರ ಹೆಸರು ಹಾಗೂ ಅವರ ಮೊಬೈಲ್ ನಂಬರ್ ನ್ನು ಬರೆದಿಟ್ಟಿದ್ದಾಳೆ.

ಆ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಕಾರಣವಾದ ಈ ಮೂವರು ವ್ಯಕ್ತಿಗಳು ನನ್ನ ಬದುಕಿನಲ್ಲಿ ಪರಿಣಾಮವನ್ನು ಬೀರಿದ್ದಾರೆ.

ಅವರುಗಳೆಂದರೆ ವರ್ಷಾ, ಪ್ರದೀಪ್ ಮತ್ತು ಇನ್ನಿತರ ಸ್ನೇಹಿತರು ನನ್ನ ಬಗ್ಗೆ ನನ್ನನ್ನು ಮಾನಸೀಕವಾಗಿ ಕುಗ್ಗಿಸಿದ್ದಾರೆ.

ಮತ್ತು ಅವರು ನನ್ನ ಬದುಕಿನ ಮಾರಕ ವ್ಯಕ್ತಿಗಳಾಗಿರುತ್ತಾರೆ. ಇವರನ್ನು ಸುಮ್ಮನೆ ಬಿಡಬಾರದು ಗುಡ್ ಬೈ ಸೇಯಿಂಗ್ ಎಂದು ಬರೆದು ಸಹಿ ಮಾಡಿದ್ದಾರೆ.

Leave a Reply

Your email address will not be published. Required fields are marked *