ಬೈಂದೂರು : ತಾಲೂಕಿನ ಪಡುವರಿ ಗ್ರಾಮದ ಸೋಮೇಶ್ವರ ಸಮುದ್ರ ತೀರದಲ್ಲಿ ದೇವಸ್ಥಾನದ ಗೋಪುರಕ್ಕೆ ಅಳವಡಿಸುವ ಕಲಶ ಪತ್ತೆಯಾಗಿದೆ.
ಕಲಶವು ಕಡಲ ಅಲೆಗಳೊಂದಿಗೆ ತೇಲಿ ಈ ದಡಕ್ಕೆ ಬಂದಿರುವ ಶಂಕೆ ಇದೆ. ಇದು ದೇವಸ್ಥಾನದ ಶಿಖರ ಕಲಶವಾಗಿದ್ದು, ಸುಮಾರು 3 ಕೆ.ಜಿ ತೂಕದ ತಾಮ್ರದ ಕಲಶವಾಗಿದೆ.

ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಸಂತ ರಾಮ ಆಚಾರ್, ಉಪನಿರೀಕ್ಷಕ ಸುಬ್ರಹ್ಮಣ್ಯ ಎಚ್,ಸಿಬ್ಬಂದಿಯವರಾದ ಯುವರಾಜ್, ರಾಘವೇಂದ್ರ ದೇವಾಡಿಗ ಹಾಗೂ ಗೃಹರಕ್ಷಕ ದಳದ ನಾಗೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪತ್ತೆಯಾದ ತಾಮ್ರದ ಕಲಶವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಲಶದ ವಾರಸುದಾರರು ಇದ್ದಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.



